

ನಾಲತವಾಡ: ನಾಗಬೇನಾಳ ಗ್ರಾಮದ ಅಖಂಡೇಶ್ವರ ಶರಣರ ಗದ್ದುಗೆ ಸಮೀಪಲ್ಲಿ ಮಹಾಲಿಂಗಪುರದ ಸೋಮಲಿಂಗೇಶ್ವರ ಶ್ರೀಗಳು ಕೈಗೊಂಡ 108 ದಿನಗಳ ಮೌನಾನುಷ್ಠಾನ ಬುಧವಾರ ಸಂಪನ್ನಗೊಂಡಿತು.
ಬೆಳಗ್ಗೆ ನಾಗಬೇನಾಳ ಗ್ರಾಮ ದೇವತೆಗೆ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮದೇವತೆ ದೇವಸ್ಥಾನದಿಂದ ಸಾರೋಟದಲ್ಲಿ ಅನುಷ್ಠಾನಗೈದ ಸ್ಥಳದವರೆಗೆ ಶ್ರೀಗಳ ಮೆರವಣಿಗೆ ನಡೆಯಿತು. ಮುತೆದಿಯರು ಕುಂಭಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀಗಳು ಮೌನಾನುಷ್ಠಾನ ಗೈದ ಸ್ಥಳದಲ್ಲಿ ನೂತನ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಿತು. ಸೊಲ್ಲಾಪುರದ ಅರ್ಚಕರಿಂದ ಹೋಮ ಹವನ ವಿಶೇಷ ಪೂಜೆ, ಬಾಲ ಮುತ್ತೆದೆಯರ ಪಾದ ಪೂಜೆ ಜರುಗಿದವು. ನಾಲತವಾಡ ಪಟ್ಟಣ ಪಂಚಾಯಿತಿ ಉಪಾಧ್ಯ ಬಸವರಾಜ ಗಂಗನಗೌಡ್ರ ಗಡ್ಡಿ, ಕುಮ್ಮಣ್ಣ ದೇಶಮುಖ, ನಾನಾಸಾಹೇಬ ದೇಶಮುಖ, ಪೃಥ್ವಿರಾಜ್ ನಾಡಗೌಡ ಹಾಗೂ ಭಕ್ತರು ಪಾಲ್ಗೊಂಡಿದ್ದರು.