

ದೇವರಹಿಪ್ಪರಗಿ: ವಿಶ್ವದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಸಿಂದಗಿಯ ಡಾ.ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ನಿವೃತ್ತ್ತ ಶಿಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಶಿಕರು ಪ್ರತಿಭಾವಂತರಿದ್ದಾರೆ. ಸರ್ಕಾರಿ ಶಾಲೆಗಳ ಹೆಚ್ಚಿನ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ಶಾಲು ಹಾಗೂ ಹಾರಕ್ಕಾಗಿ ಬಳಸುವ ಹಣವನ್ನು ರೈತರ ಹಾಗೂ ಸೈನಿಕರ ನಿಧಿಗೆ ನೀಡುವ ಮೂಲಕ ಶ್ರೇಷ್ಠತೆ ಮೆರೆಯೋಣ ಎಂದು ಹೇಳಿದರು.
ಜಿಲ್ಲಾ ಶಿಕರ ಸಂದ ಅಧ್ಯ ಜಿ.ಎಸ್.ಬೇವನೂರ ಅಧ್ಯತೆ ವಹಿಸಿದ್ದರು.
ಹಿರಿಯ ವೈದ್ಯ ಆರ್.ಆರ್.ನಾಯಿಕ, ಮಡಿವಾಳ ಮಾಚಿದೇವರ ಪ್ರತಿಷ್ಠಾನದ ಅಧ್ಯ ಬಿ.ಎಂ. ಪಾಟೀಲ, ಶಿಕರ ಸಂದ ತಾಲೂಕಾಧ್ಯ ಎ.ಎಚ್.ವಾಲೀಕಾರ ಮಾತನಾಡಿದರು.
ಗದ್ದುಗೆಮಠದ ಶ್ರೀಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೇವೆಯಿಂದ ನಿವೃತ್ತರಾದ ಶಿಕ ದಂಪತಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯ ಎಂ.ಎಸ್ ಪಾಟೀಲ, ಸತೀಶ ಪರದೇಶಿಮಠ, ನಿವೃತ್ತ್ತ ಶಿಕರಾದ ಆರ್.ಬಿ.ಪುಡಲಕಟ್ಟಿ, ಬಿ.ಜಿ.ಅರಳಿಮಟ್ಟಿ, ಎಂ.ಎಸ್.ಪಾಟೀಲ, ಜೆ.ಆರ್.ಬಿರಾದಾರ, ಪಿ ಎಸ್.ಮಿಂಚನಾಳ, .ಪಿ.ಬಿರಾದಾರ, ಶಿವಾನಂದ ಕೊಟೀನ, ಪಿ.ಸಿ.ತಳಕೇರಿ ಉಪಸ್ಥಿತರಿದ್ದರು.