

ಬ್ರಹ್ಮದೇವನಮಡು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತದಲ್ಲಿ 11 ಜನ ಅಭಿಮಾನಿಗಳ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಆರೋಪಿಸಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ದಾಳಿ ಕುರಿತು ಭದ್ರತೆ ವೈಲ್ಯ ಮತ್ತು ಗುಪ್ತಚರದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು. ಈಗ ಕಾಂಗ್ರೆಸ್ನವರು ಭದ್ರತೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? 18 ವರ್ಷದ ಬಳಿಕ ಸಿಕ್ಕ ಆರ್ಸಿಬಿ ಗೆಲುವಿನ ಸಂಭ್ರಮ ಕಸಿದುಕೊಂಡ ಸರ್ಕಾರ ತಪ್ಪಿನ ಹೊಣೆ ಹೊರಬೇಕು. ಆರ್ಸಿಬಿ ತಂಡಕ್ಕಿರುವ ಅಭಿಮಾನಿಗಳ ತೀವ್ರತೆ ಗೊತ್ತಿದ್ದರೂ ಸಹ ಗೃಹ ಸಚಿವರಿಗೆ ಗುಪ್ತಚರದ ಮಾಹಿತಿ ದೊರೆತಿತ್ತಲ್ಲವೇ? ಇದು ಭದ್ರತೆ ವೈಲ್ಯ ಅಲ್ಲದೆ ಮತ್ತೇನು. ಆತುರದಲ್ಲಿ ವಿಜಯೋತ್ಸವ ಮಾಡುವ ಅಗತ್ಯವಾದರೂ ಏನಿತ್ತು. ಸೂಕ್ತ ಬಂದೋಬಸ್ತ್ ಮಾಡದೆ ಸಂಭ್ರಮಾಚರಣೆ ಮಾಡಿದ್ದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ. ಮೃತ ಅಭಿಮಾನಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.