

ವಿಜಯಪುರ : ಇಲ್ಲಿನ ಶಾಂತವೀರ ನಗರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ನಾಗರಾಳದ ಪರಮಾನಂದ ಯೊಗಾಶ್ರಮದ ಅನಂತಾನಂದ ಶರಣರು ಉದ್ಘಾಟಿಸಿದರು.
ಅನಂತಾನಂದ ಶರಣರು ಮಾತನಾಡಿ, ಮಕ್ಕಳಿಗೆ ಯೋಗಾಸನದ ಮಹತ್ವ, ಆಸನಗಳ ಬಗ್ಗೆ, ಯೋಗದ ಇತಿಹಾಸ ಮತ್ತು ಆಧುನಿಕ ಯುಗದಲ್ಲಿ ಯೋಗದ ಬಗ್ಗೆ ವಿವರಿಸಿದರು.
ಶಿಕ್ಷಕರಾದ ಹಣಮಂತ ಚನ್ನಾಳ ಮತ್ತು ಸೌಮ್ಯಾ ಬಗಲಿ ಯೋಗದ ಮಹತ್ವ ಮತ್ತು ಅದರ ಲಾಭಗಳ ಕುರಿತು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾಯೆರ್ ನೀಲಮ್ಮ ಪೂಜಾರ, ಸಂಸ್ಥೆಯ ಸದಸ್ಯ ಜಿ.ಡಿ.ಚನ್ನಾಳ, ಶಿವಲೀಲಾ ಪೂಜಾರಿ, ಗಿರೀಶ ಬಿರಾದಾರ, ಸೂರಜ ಬೆಳಗಲಿ, ನವೀನಕುಮಾರ ಮತ್ತಿತರರಿದ್ದರು.