ಬಬಲಾದದಲ್ಲಿ ಬಸ್​ ನಿಲ್ಲಿಸಿ

Stop the bus if it is noisy.
Cíw ñÝÆãQ®Ü JvÜÆá «Ü̯ ÊÜá×ÙÝ JPÜãRo¨Ü A«ÜÂûæ »ÜáÊÜ®æàÍÜÌÄ PÝíŸÙæ ÍÜáPÜÅÊÝÃÜ ŸŸÇÝ¨Ü WÝÅÊÜá¨ÜÈÉ ŸÓ… ¯ÆáWÜvæWæ BWÜÅ×Ô, Ë»ÝXà¿á ¯¿áíñÜÅOݘPÝÄWæ ÊÜá®ÜË ÓÜÈÉÔ¨ÜÃÜá.
Published on

ಇಂಡಿ:ಪಟ್ಟಣದಿಂದ ಹೋರ್ತಿ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಬಬಲಾದ ಗ್ರಾಮದ ಬಸ್​ ನಿಲ್ದಾಣದಲ್ಲಿ ಬಸ್​ ನಿಲ್ಲಿಸಬೇಕು ಎಂದು ಆಗ್ರಹಿಸಿ, ಬಬಲಾದ ಗ್ರಾಮದ ಒಡಲ ಧ್ವನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ ಭುವನೇಶ್ವರಿ ಕಾಂಬಳೆ ಅವರು ಶುಕ್ರವಾರ ಕೆಕೆಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿದರು.

ಹೋರ್ತಿಯಿಂದ ಸಂಜೆ 4ಕ್ಕೆ ಬಬಲಾದ ಮಾರ್ಗವಾಗಿ ಒಂದು ಬಸ್​ ಮಾತ್ರವಿದೆ. ಅದು ಹೋದ ಬಳಿಕ ಯಾವದೇ ಬಸ್​ ಸೌಲಭ್ಯವಿಲ್ಲ. ವಿಜಯಪುರದಿಂದ ಬಬಲಾದಕ್ಕೆ ಬರುವ ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಬಸ್ಸಿನ ಸೌಕರ್ಯಇಲ್ಲ. ವಿಜಯಪುರದಿಂದ ಹೋರ್ತಿ ಮಾರ್ಗವಾಗಿ ಇಂಡಿ ಪಟ್ಟಣಕ್ಕೆ ಹೋಗುವ ಬಸ್​ಗಳು ಬಬಲಾದ ಗ್ರಾಮದಲ್ಲಿ ನಿಲ್ಲಿಸಿದರೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net