ಅಧಿಕಾರಕ್ಕಿಂತ ಜನರ ಸೇವೆಯೇ ಮುಖ್ಯ

Serving the people is more important than power.
ಹೂವಿನಹಿಪ್ಪರಗಿ ತಾಲೂಕಿನ ಕಾಮನಕೇರಿ ಗ್ರಾಮದಿಂದ ಯಾಳವಾರ ವರೆಗಿನ 2 ಕಿಮೀ. ರಸ್ತೆ ಡಾಂಬರೀಕರಣಕ್ಕೆ ಶಾಸಕ ರಾಜುಗೌಡ ಪಾಟೀಲ ಮಂಗಳವಾರ ಭೂಮಿ ಪೂಜೆ ನರವೇರಿಸಿದರು. ಬಸಯ್ಯ ಹಿರೇಮಠ, ಶಿವಣ್ಣ ಬಾಗೇವಾಡಿ, ರುದ್ರಗೌಡ ಹಂಚಲಿ, ಸೋಮನಗೌಡ ಕೇಮಶೆಟ್ಟಿ, ಮಲ್ಲಿಗೇಪ್ಪ ಕುಂಡಕರ್ಚಗಿ, ಸದಪ್ಪಗೌಡ ರೂಡಗಿ ಇತರರಿದ್ದರು.
Published on

ಹೂವಿನಹಿಪ್ಪರಗಿ: ಪ್ರತಿ ಗ್ರಾಮವನ್ನು 15 ವರ್ಷಗಳ ಕಾಲ ಸುತ್ತಿದ ಅನುಭವಿದೆ. ಯಾವ ಗ್ರಾಮದಲ್ಲಿ ಯಾವ ಕಾರ್ಯ ಅವಶ್ಯಕತೆ ಇದೆ ಎಂಬುದನ್ನು ನಾನು ಅರಿತು ಅಭಿವೃದ್ಧಿಕಾರ್ಯ ಕೈಗೊಳ್ಳುತ್ತಿರುವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿದರು.

ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದಲ್ಲಿ ಮಂಗಳವಾರ ಜರುಗಿದ ಕಾಮನಕೇರಿಯಿಂದ ಯಾಳವಾರ ವರೆಗಿನ ಎರಡು ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ನನಗೆ ಈ ೇತ್ರದ ಅಭಿವೃದ್ಧಿ ಮುಖ್ಯ. ಮತದಾರರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಅವರ ಋಣ ತೀರಿಸುವೆ ಎಂದು ಹೇಳಿದರು.

ಬಸಯ್ಯ ಹಿರೇಮಠ, ಶಿವಣ್ಣ ಬಾಗೇವಾಡಿ, ರುದ್ರಗೌಡ ಹಂಚಲಿ, ಸೋಮನಗೌಡ ಕೇಮಶೆಟ್ಟಿ, ಮಲ್ಲಿಗೇಪ್ಪ ಕುಂಡಕರ್ಚಗಿ, ಸದಪ್ಪಗೌಡ ರೂಡಗಿ, ಪರಸುರಾಮ ಬಾಗೇವಾಡಿ, ಹಣಮಂತ ಮಗ್ಗದ, ಹಣಮಂತ ಹರಿಜನ, ಯಲ್ಲಪ್ಪ ಖಾನಾಪುರ, ಮಲ್ಲಪ್ಪ ಖಾನಾಪುರ, ಮುಸಾ ಖಾಚಾಪುರ, ಲೋಖೋಪಯೋಗಿ ಎಇಇ ಡಿ. ಬಿ. ಕಲಬುರಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net