

ಇಂಡಿ: ಪಟ್ಟಣದ ಕಲಬುರ್ಗಿ ೌಂಡೇಷನ್ನಿಂದ ನೀಡುವ ಸಾಹಿತ್ಯ ಸಿರಿ ಪ್ರಶಸ್ತಿಗೆ ಜನಪದ ತ ಸಿಂದಗಿಯ ಡಾ.ಎಂ.ಎಂ.ಪಡಶೆಟ್ಟಿ, ವಚನ ಸಿರಿ ಪ್ರಶಸ್ತಿಗೆ ಕೆ.ಕೆ.ಕೊಪ್ಪದ ಕರ್ನಾಟಕ ಪಬ್ಲಿಕ್ ಶಾಲೆ ಉಪಪ್ರಾಚಾರ್ಯ ಡಾ.ದಾನಮ್ಮ ಝಳಕಿ ಆಯ್ಕೆಯಾಗಿದ್ದಾರೆೌಂಡೇಷನ್ ಅಧ್ಯ ಶಿವಲಿಂಗ ಕಲಬುರ್ಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಂ.ಎಂ.ಕಲಬುರ್ಗಿ ಅವರ ಕುಟುಂಬ ಸದಸ್ಯರಿಂದ ಸ್ಥಾಪನೆಗೊಂಡ ಈ ೌಂಡೇಷನ್ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದೆ. ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಈ ಪ್ರಶಸ್ತಿಯು ಹತ್ತು ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಜೂ.28 ರಂದು ಬೆಳಗ್ಗೆ 11ಕ್ಕೆೆ ಪಟ್ಟಣದ ಗುರುಭವನದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದು,್ದ ಶಾಸಕ ಯಶವಂತರಾಯಗೌಡ ಪಾಟೀಲ ಪಾಲ್ಗೊಳ್ಳುವರು ಎಂದರು.
ಶಿವಪಣ್ಣ ಗವಸಾನಿ, ಬಿ.ಎಸ್.ಹಣಮಶೆಟ್ಟಿ ಹಾಗೂ ಭೀಮಾಂತರಂಗ ವೇದಿಕೆಯ ಚಿದಂಬರ ಬಂಡಗರ, ಗೀತಯೋಗಿ, ವೈ.ಜಿ.ಬಿರಾದಾರ ಸುದ್ದಿಗೋಷ್ಠಿಯಲ್ಲಿದ್ದರು.