ಬೆಳೆಯ ವಿವರ ದಾಖಲಿಸಿ

Record crop details in the Crop Tracker app
ಚಂದ್ರಕಾಂತ ಪವಾರ
Published on

ಇಂಡಿ: ರಾಜ್ಯ ಸರ್ಕಾರ ಇ&ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ 2025&26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀೆಗೆ "ನನ್ನ ಬೆಳೆ ನನ್ನ ಹಕು'್ಕ ರೈತರ ಆ್ಯಪ್​ ಬಿಡುಗಡೆ ಮಾಡಿದೆ ಎಂದು ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ತಿಳಿಸಿದ್ದಾರೆ.

ರೈತರು ಗೂಗಲ್​ ಪ್ಲೇಸ್ಟೋರ್​ನಿಂದ ಪೂರ್ವ ಮುಂಗಾರು, ಮುಂಗಾರು ರೈತರ ಬೆಳೆ ಸಮಿೆ 2025 ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ತಾವು ಬೆಳೆದ ಬೆಳೆ ಮಾಹಿತಿಯೊಂದಿಗೆ ಛಾಯಾಚಿತ್ರವನ್ನು ಅಪ್​ಲೋಡ್​ ಮಾಡಬಹುದು. ಈ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲು ಬಳಸಲಾಗುತ್ತದೆ. ರೈತರು ಬೆಳೆ ಸಮಿೆಯಲ್ಲಿ ಪಾಲ್ಗೊಂಡು ಜಮೀನಿನ ಬೆಳೆ ಮಾಹಿತಿಯನ್ನು ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಆಯಾ ಗ್ರಾಮಗಳಿಗೆ ನಿಯೊಜಿಸಿದ ಖಾಸಗಿ ನಿವಾಸಿಗಳ ಸಹಾಯದೊಂದಿಗೆ ಮಾಹಿತಿ ದಾಖಲಿಸುವಂತೆ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net