

ವಿಜಯಪುರ: ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ತಿಳಿವಳಿಕೆ ಹೊಂದುವುದು ಅವಶ್ಯವಾಗಿದೆ. ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ದೈನಂದಿನ ವಿದ್ಯಮಾನಗಳ ಅರಿವು ಉಂಟಾಗುವುದಲ್ಲದೇ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದು ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಕೆ.ಎಸ್. ಶ್ರೀಕಾಂತ ಹೇಳಿದರು.
ವಿಆರ್ಎಲ್ ಸೂಪರ್ ಬಸ್ನಲ್ಲಿ ವಿಜಯವಾಣಿ ಪತ್ರಿಕೆ ಕಚೇರಿಗೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಅಂಕಗಳ ಜತೆ ಜ್ಞಾನ ಸಂಪಾದನೆ ಕೂಡ ಮಹತ್ವದ್ದಾಗಿದೆ. ಎಲ್ಲರಿಗೂ ಎಲ್ಲ ವಿಷಯಗಳ ಜ್ಞಾನವಿರದಿದ್ದರೂ ಸಮಯಕ್ಕೆ ತಕ್ಕಂತೆ ತಿಳಿವಳಿಕೆ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಅತ್ಯಗತ್ಯ. ಅದಕ್ಕಾಗಿ ವ್ಯವಹಾರಿಕ ಜ್ಞಾನ ಪಡೆಯಬೇಕಾದರೆ ಪ್ರತಿದಿನ ಪತ್ರಿಕೆ ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೊಂದಿರುವ "ವಿಜಯವಾಣಿ' ಪತ್ರಿಕೆಯವರು ಪ್ರತಿ ವಾರಕ್ಕೊಮ್ಮೆ ಒಂದೊಂದು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡು ಸುದ್ದಿಮನೆಯ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಅವರಲ್ಲಿ ಓದಿನ ಬಗ್ಗೆ ಅಭಿರುಚಿ ಮೂಡಿಸುತ್ತಿರುವ ಕಾರ್ಯ ಅತ್ಯಂತ ಶ್ಲಾನೀಯ ಹಾಗೂ ಸ್ತುತ್ಯಾರ್ಹ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅತೀಮುಖ್ಯ. ಸಮಯವನ್ನು ವ್ಯರ್ಥ ಮಾಡದೆ ರ್ನಿದಿಷ್ಟ ಗುರಿಯನ್ನು ಹಾಕಿಕೊಂಡು ಎಷ್ಟೇ ಕಷ್ಟವಾದರೂ ಇಟ್ಟ ಹೆಜ್ಜೆ ಹಿಂದಿಡದೆ ಗುರಿ ಮುಟ್ಟಿ, ನಿಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಳ್ಳಬೇಕು ಎಂದರು.
ನಂತರ "ವಿಜಯವಾಣಿ ದರ್ಶನ'ದಲ್ಲಿ ಸುದ್ದಿವಿಭಾಗದ ಪ್ರತಿಯೊಂದು ಮಾಹಿತಿಯನ್ನು ವಿವರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಎಲ್ಲ ಪ್ರಶ್ನೆಗಳಿಗೂ ಸಮರ್ಥ ಉತ್ತರ ನೀಡಿದರು.
ನಂತರ ವಿದ್ಯಾರ್ಥಿಗಳು ಸಂಪಾದಕೀಯ, ಪುಟ ವಿನ್ಯಾಸ, ಜಾಹಿರಾತು ಸಂಗ್ರಹಣೆ, ಪ್ರಸರಣ ವಿಭಾಗಗಳ ಸಂಪೂರ್ಣ ಕಾರ್ಯ ವಿಧಾನವನ್ನು ಅರಿತುಕೊಂಡರು. ನಂತರ ಮುದ್ರಣ ತಂತ್ರಜ್ಞಾನದ ಹಿಂದಿರುವ ತಾಂತ್ರಿಕ ಟಕದ ದರ್ಶನ ಮಾಡಿಸಲಾಯಿತು. ಸಿಟಿಪಿ ವಿಭಾಗದಲ್ಲಿ ಕಲರ್ ಕಾಂಬಿನೇಷನ್ನ ವಿಧಾನ ನೋಡಿ ಸಂತಸ ವ್ಯಕ್ತಪಡಿಸಿದರು. ಮುದ್ರಣ ವಿಭಾಗದಲ್ಲಿ ಪೂರ್ಣ ಮಾಹಿತಿ ಅರಿತು, ವಿದ್ಯಾರ್ಥಿಮಿತ್ರ ಮುದ್ರಣವನ್ನು ಕಂಡು ಸಂಭ್ರಮಿಸಿದರು.