ತೆಲಗಿ ಬದಲು ಕೌಲಗಿ ಬಳಿ ರೈಲ್ವ್ವೆ ಸುರಂಗ ಮಾರ್ಗ

Railway tunnel near Kaulagi instead of Telagi
ಗೊಳಸಂಗಿ ಸಮೀಪದ ಅಂಗಡಗೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ 11 ವರ್ಷದ ಸಾಧನಾ ಸಮಾವೇಶದಲ್ಲಿ ಮಾಜಿ ಸಚಿವ ಎಸ್​.ಕೆ.ಬೆಳ್ಳುಬ್ಬಿ ಮಾತನಾಡಿದರು. ಮಂಡಲ ಅಧ್ಯ ಸಿದ್ರಾಮ ಕಾಖಂಡಕಿ, ಶಿವಾನಂದ ಅವಟಿ, ಭರತ ಕುಲಕರ್ಣಿ ಮತ್ತಿತರರಿದ್ದರು.
Published on

ಗೊಳಸಂಗಿ: ಈ ಭಾಗದ ರೈತರು ಬೆಳೆದ ಕಬ್ಬು ಕಾರ್ಖಾನೆಗೆ ಸಾಗಿಸಲು ಅನುಕೂಲವಾಗುವಂತೆ ತೆಲಗಿ ಬಳಿಯ ರೈಲ್ವೆ ಸುರಂಗ ಸೇತುವೆ ಎತ್ತರ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಆದರೆ, ಕಿ.ಮೀ.ಗಟ್ಟಲೆ ಕಾಮಗಾರಿ ಕೈಗೊಳ್ಳುವುದು ಕಷ್ಟಸಾಧ್ಯ. ಅದರ ಬದಲು ಪಕ್ಕದ ಕೌಲಗಿ ಬಳಿ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಎಸ್​.ಕೆ.ಬೆಳ್ಳುಬ್ಬಿ ಹೇಳಿದರು.

ಕೇಂದ್ರ ಸರ್ಕಾರಕ್ಕೆ 11 ವರ್ಷ ಪೂರ್ಣಗೊಂಡ ಪ್ರಯುಕ್ತ ಅಂಗಡಗೇರಿ ಗ್ರಾಮದ ಪವಾಡ ಬಸವೇಶ್ವರ ಸಭಾಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ ವಿಜಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏನೇನು ಜನಪರ ಕಾರ್ಯಕ್ರಮಗಳು ಜಾರಿಯಾಗಿವೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸುವ ಮೂಲಕ ಅವರಿಂದಲೇ ನೂರಾರು ಯೋಜನೆಗಳನ್ನು ಬಹಿರಂಗಪಡಿಸಿ ಅವುಗಳ ಸಾರ್ಥಕ್ಯ ಬಗ್ಗೆ ಮಾಜಿ ಸಚಿವ ಎಸ್​.ಕೆ.ಬೆಳ್ಳುಬ್ಬಿ ವಿವರಿಸಿದರು.

ಜನಧನ್​, ನೋಟು ಬ್ಯಾನ್​, ಕರೊನಾ ಹೋರಾಟ, ಭೇಟಿ ಪಢಾವೊ&ಬೇಟಿ ಬಚಾವೊ, ಕಿಸಾನ್​ ಸಮ್ಮಾನ್​, ಗರೀಬಿ ಹಟಾವೊ, ರೈಲ್ವೆ ಬಜೆಟ್​, ನೀರಾವರಿ, ರಾಷ್ಟ್ರೀಯ ಹೆದ್ದಾರಿ, ಸೈನಿಕರ ಕಲ್ಯಾಣ, ರಾಮಮಂದಿರ ನಿರ್ಮಾಣ, ಪಾಕ್​ ಹತ್ತಿಕ್ಕಿರುವುದು ಹಲವಾರು ಜನಪರ ಯೋಜನೆಗಳ ಕುರಿತು ಕಾರ್ಯಕರ್ತರು ಪರಸ್ಪರ ಚರ್ಚಿಸಿ ೇತ್ರದ ಜನತೆಗೆ ಮನವರಿಕೆ ಮಾಡಿಕೊಡಬೇಕೆಂದರು.

ಬಿಜೆಪಿ ಜಿಲ್ಲಾ ಸಹ ಸಂಚಾಲಕ ಭರತ ಕುಲಕರ್ಣಿ, ಮಂಡಲ ನಿಕಟಪೂರ್ವ ಅಧ್ಯ ಶಂಕರಗೌಡ ಪಾಟೀಲ ಮಾತನಾಡಿದರು. ಬಸವನಬಾಗೇವಾಡಿ ಮಂಡಲ ಅಧ್ಯ ಸಿದ್ರಾಮ ಕಾಖಂಡಕಿ ಅಧ್ಯತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಶಿವಾನಂದ ಅವಟಿ, ಭೀರಪ್ಪಣ್ಣ ಸಾಸನೂರ, ಪ್ರಮುಖರಾದ ಶರಣು ಮುರನಾಳ, ಬಸವರಾಜ ಬಿಜಾಪುರ, ಶಾಂತಾಬಾಯಿ ಬೀಳಗಿ, ಬಂದೇನವಾಜ ವಾಲಿಕಾರ, ಮಲ್ಲಿಕಾರ್ಜುನ ದೇವರಮನಿ, ಎಸ್​.ಎಸ್​.ಗೌರಿಮಠ, ಕಲ್ಲು ಸೊನ್ನದ, ಟಿ.ಸಿ.ಯಳಮೇಲಿ, ಸಂಗನಗೌಡ ಯಂಕಂಚಿ, ರಾಜೇಶ್ವರಿ ಆಸಂಗಿ, ಈರಪ್ಪ ಬಿದ್ನಾಳ, ಆನಂದ ಬಿಷ್ಟಗೊಂಡ, ರೇವಣಸಿದ್ದ ನಂದಿಹಾಳ, ವಿಜು ಪೂಜಾರಿ, ವಿನೋದ ಭಜಂತ್ರಿ, ಶಿವಪ್ಪ ಹಂಗರಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net