

ಬಸವನಬಾಗೇವಾಡಿ: ಲಿಂಗಾಯತ ಧರ್ಮ ಮಾನ್ಯತೆಗಾಗಿ ಸೆ.1 ರಿಂದ ಅ.1 ರವರೆಗೆ ರಾಜ್ಯಾದ್ಯಂತ ಬಸವ ಸಂಸತಿ ಅಭಿಯಾನ ರಥಯಾತ್ರೆ ಜರುಗಲಿದ್ದು, ಈ ಅಭಿಯಾನಕ್ಕೆ ಮಠಾಧೀಶರು, ಬಸವ ಪರ ಸಂಟನೆಗಳು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದು ನಿವೃತ್ತ್ತ ಐಎಎಸ್ ಅಧಿಕಾರಿ, ಜಾಗತಿಕಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಪರ ಸಂಟನೆಗಳ ಒಕ್ಕೂಟದ ಸಹಯೋಗದಲ್ಲಿ ಬಸವ ಸಂಸತಿ ಅಭಿಯಾನದ ರಥಯಾತ್ರೆನಿಮಿತ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಲಿಂಗಾಯತರು ವೈದಿಕ ಪರಂಪರೆಯಿಂದ ಹೊರಗೆ ಬರಬೇಕಿದೆ. ನಮ್ಮ ಹಿರಿಯರು ಬಸವಾದಿ ಶರಣರ ವಚನಗಳನ್ನು ಪರಿಷ್ಕರಿಸಿ ನಮಗೆ ನೀಡಿದ್ದಾರೆ. ಈ ವಚನಗಳು ಲಿಂಗಾಯತ ಧರ್ಮದ ಕುರಿತು ಹೇಳುತ್ತವೆ. ಇದನ್ನು ನಾವೆಲ್ಲರೂ ಅರಿತುಕೊಂಡು ಲಿಂಗಾಯತರು ಜಾಗತರಾಗುವ ಅಗತ್ಯವಿದೆ ಎಂದರು.
ಈಚೆಗೆ ಕೆಲವರು ವಚನಗಳು ವೇದಗಳ ಭಾಷಾಂತರ, ಅನುಭವ ಮಂಟಪ ಇಲ್ಲ ಎಂದು ಸೇರಿದಂತೆ ವಚನ ಸಾಹಿತ್ಯ, ಲಿಂಗಾಯತರ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ನಾವು ಉತ್ತರ ನೀಡುವ ಮೂಲಕ ಅವರ ಸಂಚನ್ನು ವಿಲಗೊಳಿಸಲಾಗಿದೆ. ಎಲ್ಲ ಲಿಂಗಾಯತರು ಒಗ್ಗೂಡಿ ಬಸವ ಯುಗ ಆರಂಭಿಸಬೇಕಿದೆ. ಸೆ.1 ರಂದು ಆರಂಭವಾಗುವ ಅಭಿಯಾನದ ರಥಯಾತ್ರೆಯ ದಿನದಂದು ಅಂದಾಜು ಐದಾರು ಸಾವಿರ ಜನರು ಭಾಗವಹಿಸುವ ನಿರೀೆ ಇದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಅಭಿಯಾನಕ್ಕೆ ಬಸವ ನಾಡಿನ ಜನರು ಕೈಜೋಡಿಸುವ ಅಗತ್ಯವಿದೆ. ಸಚಿವ ಶಿವಾನಂದ ಪಾಟೀಲರ ಸಹಕಾರವನ್ನು ಇದಕ್ಕೆ ಪಡೆಯಲಾಗುವುದು. ಅಭಿಯಾನದ ಯಶಸ್ವಿಗೆ ನಾವು ಸದಾ ಬದ್ಧ ಎಂದರು.
ಸಾನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಮನಗೂಳಿಯ ವಿರತೀನಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಜಗತ್ತಿಗೆ ಸರಿಯಾಗಿ ಮುಟ್ಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾವು ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಲಿಂಗಾಯತರು ಸಹಕಾರ ನೀಡಬೇಕು ಎಂದರು.
ಬೆಳಗಾವಿ ಜಿಲ್ಲಾ ಲಿಂಗಾಯತ ಮಹಾಸಭಾ ಅಧ್ಯ ಬಸವರಾಜ ರೊಟ್ಟಿ, ವಿಜಯಪುರದ ಬಸನಗೌಡ ಹರನಾಳ ಮಾತನಾಡಿದರು.
ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಸಾಹಿತಿ ಲ.ರು.ಗೊಳಸಂಗಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯ ಎ್.ಡಿ.ಮೇಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ವ್ಹಿ.ಬಿ.ಮರ್ತೂರ, ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ, ಕದಳಿ ವೇದಿಕೆಯ ಸಾವಿತ್ರಿ ಕಲ್ಯಾಣಶೆಟ್ಟಿ, ಮುಖಂಡರಾದ ಬಿ.ಕೆ.ಕಲ್ಲೂರ,ಬಸವರಾಜ ಹಾರಿವಾಳ, ಎಸ್.ಆರ್.ಹೂಗಾರ, ಸಂಗನಗೌಡ ಚಿಕ್ಕೊಂಡ, ಎಸ್.ಎ.ದೇಗಿನಾಳ, ಮಲ್ಲಿಕಾರ್ಜುನ ಹಡಪದ, ಶರಣು ಬಸ್ತಾಳ ಭಾಗವಹಿಸಿದ್ದರು,
ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತವಿಕ ಮಾತನಾಡಿದರು. ಎಂ ಜಿ ಆದಿಗೊಂಡ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಸಂಗನಗೌಡ ಚಿಕ್ಕೊಂಡ ವಂದಿಸಿದರು.