ಸಂಸ್ಥೆಗಳಲ್ಲಿ ರಾಜಕಾರಣ ಸಲ್ಲ

Politics in institutions is not allowed.
Politics in institutions is not allowed.
Published on

ಹೋರ್ತಿ: ಸಂಸ್ಥೆಗಳ ಆಡಳಿತದಲ್ಲಿ ರಾಜಕಾರಣ ಮಾಡಬಾರದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಶನಿವಾರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ನೂತನ ಕಟ್ಟಡ ಉಧ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನೀರು, ವಿದ್ಯುತ್​, ಸಾಲ ಮನ್ನಾ ಯೋಜನೆ ನೀಡುವ ಮೂಲಕ ರೈತರ ನೆರವಿಗೆ ಬಂದಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಪಿಕೆಪಿಎಸ್​ ಸಂವು ರೈತರಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಈ ಭಾಗದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಅಂದಾಗ ಮಾತ್ರ ರೈತರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿದರು, ಡಾ.ಮಹಾಂತಪ್ರಭು ಸ್ವಾಮೀಜಿ, ಶೇಗುಣಸಿ ಶ್ರೀಗಳು ಆಶೀರ್ವಚನ ನೀಡಿದರು.

ಅಡವಿ ಲಿಂಗ ಮಹಾರಾಜರು, ಹಾಲು ಒಕ್ಕೂಟದ ಅಧ್ಯ ಈರಣ್ಣ ಕರಿಗೌಡರ, ಪಿಕೆಪಿಎಸ್​ ಅಧ್ಯ ಮಹಾದೇವ ಪೂಜಾರಿ, ಡಿಸಿಸಿ ಬ್ಯಾಂಕಿನ ಉಪಾಧ್ಯ ಆರ್​.ಜಿ. ಗುಡದಿನ್ನಿ, ತಹಸೀಲ್ದಾರ್​ ಸಿದ್ದರಾಯ ಭೋಸಗಿ, ಗ್ರಾ.ಪಂ.ಅಧ್ಯ ಜಯಶ್ರೀ ಭೋಸಗಿ, ಎಂ.ಆರ್​. ಪಾಟೀಲ್​, ಶ್ರೀಮಂತ ಇಂಡಿ, ಕೆ.ಭಾಗ್ಯಶ್ರೀ, ಕೆ.ಎಚ್​.ವಡ್ಡರ, ಎಂ.ಜಿ.ಬಿರಾದಾರ, ಎನ್​.ಎಸ್​. ದೇಸಾಯಿ, ಟಿ.ಕೃಷ್ಣಮೂರ್ತಿ, ಬಿ.ಬಿ.ಗಡ್ಡದ, ಸುರೇಶ ದೇಸಾಯಿ, ಎಸ್​.ಎಂ.ದುರ್ಗದ, ಮುಖ್ಯ ಕಾರ್ಯ ನಿರ್ವಾಹಕ ಅಣ್ಣಪ್ಪ ಪೂಜಾರಿ, ಕಲ್ಲನಗೌಡ ಪಾಟೀಲ, ಅರವಿಂದ ಪೂಜಾರಿ, ಸಂತೋಷ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net