ಅಂಬೇಡ್ಕರ್​ ಭಾವಚಿತ್ರಕ್ಕೆ ಕೆಸರು ಬಳಿದು ಅವಮಾನ

Mud falls on Ambedkar's portrait in Honnalli
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಂಬೇಡ್ಕರ್​ ಭಾವಚಿತ್ರಕ್ಕೆ ಕೆಸರು ಬಳಿದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂದಿಸುವಂತೆ ಒತ್ತಾಯಿಸಿ ದಲಿತಪರ ಸಂಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಅಂಬೇಡ್ಕರ್​ ವೃತ್ತದಲ್ಲಿ ಅಳವಡಿಸಿರುವ ಬ್ಯಾನರ್​ನಲ್ಲಿನ ಅಂಬೇಡ್ಕರ್​ ಭಾವಚಿತ್ರಕ್ಕೆ ಕಿಡಿಗೇಡಿಗಳು ಕೆಸರು ಬಳಿದು ಅವಮಾನ ಮಾಡಿದ ಟನೆ ಭಾನುವಾರ ಮಧ್ಶಾಹ್ನ ನಡೆದಿದೆ.

ವಿಷಯ ತಿಳಿಯುತ್ತಲೇ ಟನೆ ಖಂಡಿಸಿ ಗ್ರಾಮದಲ್ಲಿ ದಲಿತ ಸೇನೆ ಸಂಟನೆ ಹಾಗೂ ದಲಿತ ಪರ ಸಂಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್​ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟನಾ ಸ್ಥಳಕ್ಕೆ ಉಪ ತಹಸೀಲ್ದಾರ್​ ಐ.ಜೆ.ಬಳಗಾನೂರ, ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್​ ಪಾಟೀಲ, ಕಲಕೇರಿ ಪಿಎಸ್​ಐ ಸುರೇಶ ಮಂಟೂರ, ಸಿಂದಗಿ ಸಿಪಿಐ ಆರ್​.ಐ. ಮಖಾಂದಾರ, ಗ್ರಾಮ ಲೆಕ್ಕಾಧಿಕಾರಿ ಆಶ್​ೀ ಜಮಾದಾರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸಂಟನೆಗಳು ಹೋರಾಟವನ್ನು ಹಿಂಪಡೆದರು.

ದಲಿತ ಮುಖಂಡರಾದ ರಾಕೇಶ ಕಾಂಬಳೆ, ಚಂದ್ರಕಾಂತ ಸಿಂಗೆ, ಪರಸುರಾಮ ಕಾಂಬಳೆ, ಮಹೇಶ ಜಾಬನವರ, ಹಣಮಂತ ಯಂಟಮಾನ, ರಮೇಶ ಹರಿಜನ ಚಟ್ನಳ್ಳಿ, ಅಶೋಕ ಯಂಟಮಾನ, ಶರಣು ಮನಗೂಳಿ, ಸುರೇಶ ಕೆಂಭಾವಿ, ಆನಂದ ತಳವಾರ, ಈರಣ್ಣ ಭಜಂತ್ರಿ, ಕುಮಾರ ಭಜಂತ್ರಿ, ಸುರೇಶ ಮಡಿವಾಳರ, ದಿಲೀಪ ಕೆಂಭಾವಿ, ಹುಚ್ಚಪ್ಪ ಕೆಂಭಾವಿ, ಶರಣು ಹರಿಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net