

ನಾಲತವಾಡ: ಆರಂಭಗೊಂಡ ನಂತರ ನಿರ್ವಹಣೆ ಕೊರತೆಯಿಂದಾಗಿ ಸಾರ್ವಜನಿಕರ ಅಪಸ್ಪರಕ್ಕೆ ಒಳಗಾಗಿದ್ದ ಇಂದಿರಾ ಕ್ಯಾಂಟಿನ್ಗೆ ಕೊನೆಗೂ ನಿರ್ವಹಣೆ ಭಾಗ್ಯ ದೊರೆಕಿದ್ದು ಸಂತಸ ತಂದಿದೆ.
ಹಲವು ಕಾರಣಗಳಿಂದ ಪಾಲನೆ, ಸ್ವಚ್ಛತೆ, ಅಡುಗೆ ಉಪಕರಣಗಳ ಬಳಕೆ ಮತ್ತು ಸಿಬ್ಬಂದಿಗಳ ಕೊರತೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಲವಾಗಿತ್ತು.
ಕ್ಯಾಂಟಿನ್ ಸುತ್ತಲೂ ನೀರು ನಿಲ್ಲುತ್ತಿತ್ತು, ನೀರಿನಲ್ಲೇ ನಿಂತು ತಿಂಡಿ, ಊಟ ಮಾಡುವ ಅನಿವಾರ್ಯತೆ ಸಾರ್ವಜನಿಕರಿಗಿತ್ತು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಶಾಸಕರು ಸೂಚಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಕ್ಯಾಂಟಿನ್ ಗುತ್ತಿಗೆದಾರರು ಸ್ವಚ್ಛತೆಗೆ ಮುಂದಾಗಿದ್ದಾರೆ. ಅಡುಗೆ ಸಿದ್ದಪಡಿಸುವ ಹೊಸ ಉಪಕರಣಗಳನ್ನು ಅಳವಡಿಸಿಲಾಗಿದೆ. ಇನ್ಮುಂದೆ ನಿಯಮಾನುಸಾರ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ.