

ಮುದ್ದೇಬಿಹಾಳ: ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ಕ್ರೀಡಾಚಟುವಟಿಕೆ ಇಲ್ಲದ ಶಿಣ ದೈಹಿಕ ಸಾಮರ್ಥ್ಯಕ್ಕೆ ನಿರರ್ಥಕ ಎಂದು ಬಿಇಒ ಬಿ.ಎಸ್. ಸಾವಳಗಿ ಹೇಳಿದರು.
ಬಿದರಕುಂದಿ ಸರ್ಕಾರಿ ಆರ್ಎಂಎಸ್ಎ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶೈಣಿಕ ವರ್ಷದ ಮೊದಲ ಕ್ರೀಡಾಕೂಟ ಸಂಟನೆ ಕಾರ್ಯಾಗಾರದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಮಟ್ಟದಲ್ಲಿ ನೈಜ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಜಿಲ್ಲೆ, ವಿಭಾಗ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಸಾಮರ್ಥ್ಯ ತಂದುಕೊಡುವುದು ದೈಹಿಕ ಶಿಣ ಶಿಕರ ಜವಾಬ್ದಾರಿಯಾಗಿದೆ ಎಂದರು.
ತಾಲೂಕು ದೈಹಿಕ ಶಿಣ ಪರಿವೀಕ ಬಿ.ವೈ. ಕವಡಿ ಮಾತನಾಡಿ, ವಲಯ, ಕ್ಲಸ್ಟರ್ ಹಂತದ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುವಿನ ಅರ್ಹತೆ ತೋರಿಸುವ ಗುರುತಿನ ಕಾರ್ಡ್ ಸಮೇತ ಕ್ರೀಡಾಕೂಟಕ್ಕೆ ಬಂದರೆ ಕ್ರೀಡೆಗೆ ಬೆಲೆ ಸಿಗುವುದು ಮಾತ್ರವಲ್ಲದೆ ತಂಟೆ ತಕರಾರುಗಳು ಕಡಿಮೆಯಾಗುತ್ತವೆ ಎಂದರು.
ಶಿಕಿ ಶೋಭಾ ಸೋಂಪುರ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸುರೇಶ ಆಲೂರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾ ಖಜಾಂಚಿ ಬಿ.ಎಸ್. ಹೊಳಿ, ದೈಹಿಕ ಶಿಣ ಶಿಕರ ಸಂದ ತಾಲೂಕಾಧ್ಯಕ್ಷ ಎ.ಸಿ. ಕೆರೂರ, ಪ್ರಾಥಮಿಕ ಶಾಲಾ ದೈಹಿಕ ಶಿಣ ಶಿಕರ ಸಂದ ಅಧ್ಯ ಕೆ.ಬಿ. ಸಜ್ಜನ, ದೈಹಿಕ ಶಿಣ ಶಿಕರಾದ ಶಾಂತಪ್ಪ ಹವಾಲ್ದಾರ, ಎನ್.ಡಿ. ಪಣೇದಕಟ್ಟಿ, ಬಿ.ಎಸ್. ಕೊಂಡಗೂಳಿ, ಎಂ.ಎಸ್. ಕೊಣ್ಣೂರ, ಪಿ.ಎಸ್. ಚಿಂತಾಮಣಿ, ಆರ್.ಬಿ. ಮಠಪತಿ, ವಿಜಯಲಕ್ಷಿ$್ಮ ಮಾಲಿಪಾಟೀಲ, ಕೆ.ಬಿ. ಹೊಸಮನಿ, ಎಸ್.ಕೆ. ಅಸ್ಕಿ, ಬಿ.ಜಿ. ಬಳವಾಟ, ಎಸ್.ಬಿ. ಸಜ್ಜನ, ಸಿ.ಪಿ. ಓಲೆಕಾರ, ಬಿ.ಕೆ.ಬಾಗವಾನ, ಸಿ.ಐ. ಮಠ, ವೆಂಕಟೇಶ ಉಪಸ್ಥಿತರಿದ್ದರು.
ಬಾಲಾಜಿ ಸುಧಾಕರ್ ಸ್ವಾಗತಿಸಿದರು. ಎನ್.ಎಸ್.ಬಿರಾದಾರ ನಿರೂಪಿಸಿದರು. ಎಸ್.ಆರ್.ಪಾಟೀಲ ವಂದಿಸಿದರು.
ಕಾರ್ಯಾಗಾರಕ್ಕೂ ಮುನ್ನ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಗಿಡ ನೆಟ್ಟು ನೀರೂಣಿಸಲಾಯಿತು.