

ಬಸವನಬಾಗೇವಾಡಿ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಲಕ್ಷಿ$್ಮನಗರ ಜಲಾವೃತಗೊಂಡು ಅಂದಾಜು 40 ಮನೆಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯವಸ್ತಗೊಂಡಿದೆ.
ಒಂದು ಗಂಟೆಗೂ ಹೆಚ್ಚು ಮಳೆ ಸುರಿದ ಪರಿಣಾಮ ಲಕ್ಷಿ$್ಮ ನಗರ ಹಾಗೂ ಬಸವೇಶ್ವರ ವೃತ್ತದ ಬಳಿಯ ಮೇಘಾ ಮಾರುಕಟ್ಟೆಗೆ ನೀರು ನುಗ್ಗಿದೆ. ನಿರಾಶ್ರಿತರಿಗೆ ಯಾತ್ರಿ ನಿವಾಸದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳೆಯ ಆರ್ಭಟಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಪಾರ ಪ್ರಮಾಣದ ನೀರು ಹೊಲಗದ್ದೆಗಳಿಗೆ ನುಗ್ಗಿದೆ. ಹೊಲಗಳ ಒಡ್ಡು ಒಡೆದು ಅಪಾರ ಪ್ರಮಾಣದ ಹಾನಿಯಾಗಿದೆ.
ನೀರು ನುಗ್ಗಿರುವ ಸ್ಥಳಕ್ಕೆ ಕಂದಾಯ ನಿರೀಕ ಎಸ್.ಎಸ್. ದೇಸಾಯಿ, ಪುರಸಭೆ ಸಿಬ್ಬಂದಿ ರಾಜು ರಾಥೋಡ, ಗ್ರಾಮ ಲೆಕ್ಕಾಧಿಕಾರಿ ಅಂಜುಮ ಅವಟಿ, ಸತೀಶ ವಾಲಿಕಾರ, ಅಲ್ಲಾಭಕ್ಷ ಕೊರಬು ಭೇಟಿ ನೀಡಿ ಪರಿಶೀಲಿಸಿದ್ದಾರೆ.