

ತಾಳಿಕೋಟೆ: ಧಾರವಾಡ ನಾಟ್ಯಸ್ಫೂರ್ತಿ ಆರ್ಟ್, ಕಲ್ಚರಲ್ ಅಕಾಡೆಮಿ ಕೊಡಮಾಡುವ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಗೆ ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆ ಶಿಕ ಬಿ.ಐ. ಹಿರೇಹೊಳಿ ಆಯ್ಕೆಯಾಗಿದ್ದಾರೆ.
ಜೂ.15 ರಂದು ಧಾರವಾಡದ ಆಲೂರ ವೆಂಕಟರಾವ ಭವನದಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.