

ವಿಜಯಪುರ: ಭಾರತ ದೇಶದಲ್ಲಿ ಹಿಂದುಗಳ ರಣೆಗಾಗಿ ಹಿಂದು ಡೆವಲಪ್ಮೆಂಟ್ ಸೆಂಟರ್ (ಎಚ್.ಡಿ.ಸಿ) ಸ್ಥಾಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕಾಧ್ಯ ಡಾ.ಪ್ರವಿಣ್ಭಾಯ್ ತೊಗಾಡಿಯಾ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಸಹಾಯವಾಣಿ ಸ್ಥಾಪಿಸುವ ಮೂಲಕ ದೇಶದ ಪ್ರತಿ ಹಿಂದುಗಳಿಗೆ ಸಹಾಯ, ಸಹಕಾರ ನೀಡಲಾಗುತ್ತಿದೆ. ಬಡ ಹಿಂದುಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಯಲ್ಲಿದೆ. ದೇಶದಲ್ಲಿ ಯಾವ ಸ್ಥಳದಲ್ಲಾರೂ ಹಿಂದುಗಳಿಗೆ ಸಹಾಯ ಮಾಡಲು ಸಂಟನೆ ಬದ್ಧ್ದವಾಗಿದೆ ಅರ್ಹ ಹಿಂದುಗಳು ಸಹಾಯವಾಣಿ ಸಂಖ್ಯೆ (020-66803300) ಉಚಿತ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.
ಈ ಯೋಜನೆಯಡಿ ದೇಶದಾದ್ಯಂತ ಹತ್ತು ಸಾವಿರ ವೈದ್ಯರು ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಹಿಂದುಗಳ ರಣೆ ಮಾಡುವ ಸಂಕಲ್ಪ ನಮ್ಮದಾಗಿದೆ. ಭಾರತ ಹಿಂದು ರಾಷ್ಟ್ರವಾಗಬೇಕು. ಈ ನಿಟ್ಟಿನಲ್ಲಿ ಹಿಂದುಪರ ಸಂಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಹಿಂದುಸ್ಥಾನದಲ್ಲಿ ಹಿಂದು ಜನಸಂಖ್ಯೆ ಹೆಚ್ಚಳವಾಗಬೇಕು. ಹಿಂದುಗಳು ಅಲ್ಪ ಸಂಖ್ಯಾತರಾಗಬಾರದು. ಭಾರತದಲ್ಲಿ ಕಳೆದ ಕೆಲ ವರ್ಷದಲ್ಲಿ ಶೇ.10 ರಷ್ಟು ಹಿಂದು ಜನಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜನಸಂಖ್ಯೆ ಹೆಚ್ಚಳದ ಬಗ್ಗೆ ಮಾತನಾಡುವುದು ಸಂವಿಧಾನ ವಿರೋಧಿಯಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನ ಎಲ್ಲರಿಗೂ ಅನ್ವಯವಾಗಬೇಕಲ್ವೆ, ಹಿಂದುಗಳಿಗೊಂದು ಕಾನೂನು, ಮುಸ್ಲಿಂರಿಗೊಂದು ಕಾನೂನು ಯಾಕೆ?. ದೇಶದ ಬಗ್ಗೆ ಕಾಳಜಿ ಇದ್ದರೆ ಮುಸ್ಲಿಂರು ಎರಡೇ ಮಕ್ಕಳುನ್ನು ಪಡೆಯಲಿ. ಆಳುವ ಸರ್ಕಾರಗಳು ಕೇವಲ ಹಿಂದು ಜನಸಂಖ್ಯೆ ನಿಯಂತ್ರಿಸುತ್ತಿವೆ ಎಂದು ಆರೋಪಿಸಿದರು.
ಬಾಂಗ್ಲಾ ನುಸುಳುಕೋರರನ್ನು ತಡೆಯಬೇಕು, ಜನಸಂಖ್ಯಾ ನಿಯಂತ್ರಣ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು, ಹಿಂದುಗಳು ಮೂವರು ಮಕ್ಕಳನ್ನು ಹೆರಬೇಕು ಎಂಬ ಪ್ರಮುಖ ಅಂಶಗಳನ್ನಿಟ್ಟುಕೊಂಡು ಅಭಿಯಾನ ಆರಂಭಿಸಲಾಗಿದೆ. ಇಂದು ವರ್ಷದಲ್ಲಿ ಎರಡು ಕೋಟಿ ಕುಟುಂಬಗಳನ್ನು ಭೇಟಿಮಾಡಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರಮುಖರಾದ ಪ್ರದಿಪ, ಗಂಗಾಧರ, ಮಲ್ಲಿಕಾರ್ಜುನ ಅದ್ವಾನಿ ಸುದ್ದಿಗೋಷ್ಠಿಯಲ್ಲಿದ್ದರು.
ಹನುಮಾನ್ ಚಾಲೀಸ್ ಪಠಣ ಕೇಂದ್ರ:
ಹಿಂದುಧರ್ಮ ಸಂಟಿಸುವ ಉದ್ದೇಶದಿಂದ ಹನುಮಾನ್ಚಾಲೀಸ್ ಪಠಣ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಊರಿಗೊಂದು ಹನುಮಾನ್ಚಾಲೀಸ್ ಕೇಂದ್ರ ಸ್ಥಾಪಿಸುವ ಸಂಕಲ್ಪ ಹೊಂದಲಾಗಿದೆ. ಪ್ರತಿ ಶನಿವಾರ ಸಂಜೆ ಸಾಮೂಹಿಕ ಪಠಣ ಮಾಡಲಾಗುತ್ತಿದೆ ಎಂದರು.
ಒಂದು ಲ ಸ್ಥಳಗಳಲ್ಲಿ ಹನುಮಾನ್ಚಾಲೀಸ್ ಪಠಣ ಮಾಡುವ ಗುರಿ ಹೊಂದಲಾಗಿದೆ. ಸಮೃದ್ಧಿ, ಸುರೆ, ಆರೋಗ್ಯ, ಮಕ್ಕಳ ಅಭಿವೃದ್ಧಿ, ಮಹಿಳಾ ಸುರತೆ, ಉದ್ಯೋಗಕ್ಕಾಗಿ ಹನುಮಾನ್ ಚಾಲೀಸ್ ಮೂಲಕ ಹಿಂದು ಸಂಟನೆ ಮಾಡುತ್ತಿದ್ದೇವೆ ಎಂದರು.
ಕೃಷಿಕರ ಶ್ರಮಕ್ಕೆ ಬೇಲೆ ಇಲ್ಲ:
ದೇಶದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಕೃಷಿಗೆ ಬಳಸುವ ಪರಿಕರಗಳ ಬೆಲೆ ಹೆಚ್ಚಾಗುತ್ತಲೇ ಇದೆ. ರೈತ ಬೆಳೆದ ಬೆಳೆಗಳ ಬೆಲೆೆ ಕುಸಿಯುತ್ತಿದೆ.
ದೇಶದಲ್ಲಿ ಅನ್ನದಾತನ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ರೈತಾಪಿ ವರ್ಗ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕಳೆದ 20 ವರ್ಷದಲ್ಲಿ ದೇಶದಲ್ಲಿ ನಾಲ್ಕು ಲ ರೈತರು ಆತ್ಮಹತ್ಯೆ ಎಂದು ತೊಗಾಡಿಯಾ ಕಳವಳ ವ್ಯಕ್ತ ಪಡಿಸಿದರು.