30 ರಿಂದ ಜು.10ರ ವರೆಗೆ ಅಜ್ಜನ ಜಾತ್ರೆ

Grandfather's Fair from 30th to 10th July
ಶ್ರೀಖಾಸ್ಗತೇಶ್ವರ ಮಹಾ ಶಿವಯೋಗಿ
Published on

ತಾಳಿಕೋಟೆ: ಶ್ರೀಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾಮಹೋತ್ಸವ ಜೂ.30 ರಿಂದ ಜು.10 ವರೆಗೆ ಸಂಭ್ರಮದಿಂದ ಜರುಗಲಿದೆ.

ಖಾಸ್ಗತೇಶ್ವರ ಮಠದ ಪೀಠಾಧೀಪತಿ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಅಧ್ಯತೆಯಲ್ಲಿ ಪ್ರತಿ ದಿನ ಬೆಳಗ್ಗೆ 6ಕ್ಕೆ ಖಾಸ್ಗತೇಶ್ವರ ಕತುರ್ ಗದ್ದುಗೆಗೆಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿಯನ್ನು ವಿಶ್ವನಾಥ ವಿರಕ್ತಮಠ ಅವರು ನೆರವೇರಿಸುವರು.

ಒಂಬತ್ತು ದಿನ ಬೆಳಗ್ಗೆ 8.30ರಿಮದ 9.30 ಹಾಗೂ ಸಂಜೆ 6ರಿಂದ 7ರ ವರೆಗೆ ನಿಜಗುಣ ಶಿವಯೋಗಿಗಳು ಪ್ರವಚನ ನೀಡುವರು. ಕೋರವಾರ ಚೌಕಿಮಠದ ಶ್ರೀಮುರುಂದ್ರ ಸ್ವಾಮಿಗಳು, ಗಡಿ ಸೋಮನಾಳದ ಇಂದುಧರ ಮಹಾಸ್ವಾಮಿಗಳು, ಶಾಂತಮ್ಮ ಕೋಳೂರ, ದಾನಮ್ಮ ಮಠ, ಇಂಧುಮತಿ ಬಬಲೇಶ್ವರ, ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯ ಎಸ್​.ಎಂ.ಬೇನಾಳಮಠ ಉಪಸ್ಥಿತರಿರುವರು.

ಜೂ.30ರಿಂದ ಜು.7ರ ವರೆಗೆ ಸಪ್ತಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ತಾಳಿಕೋಟೆ ಸೇರಿ ವಿವಿಧ ಗ್ರಾಮಗಳ ಅಂದಾಜು 150ಕ್ಕೂ ಅಧಿಕ ಭಜನಾ ಮಂಡಳಿಗಳ ಸದಸ್ಯರು ಭಜನೆಯಲ್ಲಿ ಪಾಲ್ಗೊಳ್ಳುವರು.

ಜು. 6ರಂದು ಸಂಜೆ 5ಕ್ಕೆ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಧ್ವಜದ ಮೆರವಣಿಗೆ ನಡೆಯಲಿದೆ.

7ರಂದು ನಸುಕಿನ 4ಕ್ಕೆ ಮೊಸರು ಗಡಿಗೆ(ಗೋಪಾಲ ಕಾವಲಿ) ಒಡೆಯುವ ಕಾರ್ಯಕ್ರಮ. ಮದ್ಯಾಹ್ನ 12ರಿಂದ ಮಹಾಪ್ರಸಾದ ವಿತರಣೆ ನಡೆಯುವುದು. ಮಠದಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮ ಜರುಗುವದು.

8 ಬೆಳಗ್ಗೆ 8ಕ್ಕೆ ಖಾಸ್ಗತ ಮಹಾಸ್ವಾಮಿಗಳ, ಶ್ರೀ ವಿರಕ್ತ ಮಹಾಸ್ವಾಮಿಗಳ ಬೆಳ್ಳಿಯ ಮೂರ್ತಿಗಳನ್ನು ಆನೆ ಅಂಭಾರಿಯ ಮೇಲೆ ಹಾಗೂ ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ರಥದಲ್ಲಿ ಕೂಡಿಸಿ ಮೆರವಣಿಗೆ ಮೂಲಕ ರಾಜವಾಡೆಯ ಭೀಮನಭಾವಿಯಲ್ಲಿ ಗಂಗಸ್ಥಳಕ್ಕೆ ತೆರಳಿ ಗಂಗಸ್ಥಳ ಮುಗಿಸಿಕೊಂಡು ಮರಳಿ ಮಠಕ್ಕೆ ತಲುಪುವದು. ಸಂಜೆ 5ಕ್ಕೆ ಮಹಾ ರಥೋತ್ಸವ ನಂತರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುವರು.

10ರಂದು ಸಂಜೆ 5ಕ್ಕೆ ಖಾಸ್ಗತ ಶಿವಯೋಗಿಗಳವರ ರಥದ ಕಳಸ ಇಳಿಸುವುದರೊಂದಿಗೆ ಜಾತ್ರೆಗೆ ತೆರೆ ಬೀಳುವುದು ಎಂದು ಶ್ರೀಮಠದ ಉಸ್ತುವಾರಿ ವೇ.ಮುರುಶ ವಿರಕ್ತಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net