

ತಾಳಿಕೋಟೆ: ಮನುಷ್ಯನ ಜೀವನದಲ್ಲಿ ಪ್ರಮುಖ ಗುರಿಗಳಲ್ಲಿ ಒಂದಾಗಿದ್ದು, ಅಪೇತ ಗುರಿ ಮುಟ್ಟಲು ಗ್ರಹಸ್ತಾಶ್ರಮವು ಪ್ರಮುಖ ಸಾಧನವಾಗಿದೆ ಎಂದು ಗುಳೆದಗುಡ್ಡ& ತಾಳಿಕೋಟೆ ಮಠದ ಪೀಠಾಧಿಪತಿ ಶ್ರೀಕಾಶಿನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ನಮಾಜಟ್ಟಿ ಹಾಲ್ನಲ್ಲಿ ಏರ್ಪಡಿಸಿದ್ದ ಪುರಸಭಾ ಮಾಜಿ ಸದಸ್ಯ ಇಬ್ರಾಹಿಂ ಮನ್ಸೂರ ಕುಟುಂಬದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ನಾಲ್ಕು ಆಶ್ರಮಗಳಲ್ಲಿ ಸಾಧನೆಗೆ ಮುಖ್ಯವಾಗಿದ್ದು ಗ್ರಹಸ್ಥಾಶ್ರಮ ಎಂದರು.
ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀಶಿವಕುಮಾರ ಸ್ವಾಮೀಜಿ, ಮುಖಂಡರಾದ ಸೈಯದ ಶಕೀಲ ಅಹ್ಮದ ಖಾಜಿ, ಸೈಯದ ಪಶುಉದ್ದೀನ ಖಾಜಿ, ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಶ ವಿರಕ್ತಮಠ, ಸಿ.ಬಿ.ಅಸ್ಕಿ, ಡಾ.ಪ್ರಭುಗೌಡ ಲಿಂಗದಳ್ಳಿ, ಅಬ್ದುಲ್ಗನಿಸಾಬ ಲಾಹೋರಿ, ಮುತ್ತಪ್ಪ ಚಮಲಾಪುರ, ಪರಶುರಾಮ ತಂಗಡಗಿ, ಲಾಲಹುಸೇನ ಕಂದಗಲ್ಲ, ಹಸನಸಾಬ ಕೊರ್ಕಿ, ಬಿ.ಎಸ್.ಪಾಟೀಲ ,ಸಿದ್ದನಗೌಡ ಪಾಟೀಲ, ಅಲ್ಲಾಬ ನಮಾಜಕಟ್ಟಿ, ಅಬ್ದುಲ್ರಹೇಮಾನ ನಮಾಜಕಟ್ಟಿ, ಪ್ರಭುಗೌಡ ಮದರಕಲ್ಲ, ನಬಿರಸೂಲ ಲಾಹೋರಿ, ಆರ್.ಎಸ್.ಪಾಟೀಲ, ಜಿ.ಪಂ. ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ, ಅಬುಬಕರ ಲಾಹೋರಿ, ಎಂ.ಎಚ್.ಕೆಂಭಾವಿ, ಎಸ್.ಎನ್.ಡೋಣಿ, ಕೆ.ಎಚ್.ಪಾಟೀಲ, ಎಂ.ಕೆ.ಕೆಂಭಾವಿ, ಖಾಜಾಹುಸೇನ ಚೌದ್ರಿ, ಬಾಬುರಾವ ಶಿಂಧೆ, ಮಾನಸಿಂಗ್ ಕೊಕಟನೂರ, ಪ್ರಕಾಶ ಹಜೇರಿ, ಎ.ಬಿ.ಕಲಾಲ, ಕೆ.ಐ.ಸಗರ, ಹಸನ ಮನಗೂಳಿ, ನಬಿಸಾಬ ಮಣಿಯಾರ ಉಪಸ್ಥಿತರಿದ್ದರು.