

ಸಿಂದಗಿ: ಉತ್ತಮ ಸಂಸ್ಕಾರ ನೀಡುವ ಮೂಲಕ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಸಾರಂಗಮಠ&ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ನಿವೃರ್ತ್ತ ಶಿಕ ಸಿದ್ದಣ್ಣ ಅಂಜುಟಗಿ ಅವರ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಜನ್ಮ ಕೊಟ್ಟ ತಾಯಿ ಹಾಗೂ ಅರ ಕಲಿಸಿದ ಗುರುಗಳನ್ನು ಎಂದು ಮರೆಯಬಾರದು. ಕುಟುಂಬ ಮತ್ತು ಶಿಕರನ್ನು ಆದರ್ಶವಾಗಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಶಿಕ ಸಿದ್ದಣ್ಣ ಅವರ ಪಾತ್ರ ಪ್ರಮುಖವಾಗಿದೆ ಎಂದು ಬಣ್ಣಿಸಿದರು.
ಸಾನ್ನಿಧ್ಯವಹಿಸಿದ್ದ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ವಿದ್ಯಾರ್ಥಿ ಜೀವನದಲ್ಲಿ ಮಾನವೀಯಮೌಲ್ಯಗಳನ್ನು ಬೆಳೆಸಿಕೊಂಡು ಮಾದರಿಯಾಗಿ ಬದುಕಬೇಕು ಎಂದರು.
ಬಿಜೆಪಿ ಮುಖಂಡ ಶ್ರೀಶೈಲಗೌಡ ಮಾಗಣಗೇರಿ ಮಾತನಾಡಿದರು. ತಾಲೂಕು ಜಂಗಮ ಸಮಾಜದ ಅಧ್ಯ ಶಂಕರಲಿಂಗಯ್ಯ ಹಿರೇಮಠ ಅಧ್ಯತೆವಹಿಸಿದ್ದರು.
ತಾಲೂಕು ಗಾಣಿಗ ಸಮಾಜದ ಅಧ್ಯ ಮಲ್ಲಣ್ಣ ಮನಗೂಳಿ, ಎಪಿಎಂಸಿ ನಿರ್ದೇಶಕ ಬಸಯ್ಯ ಹಿರೇಮಠ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ವಿಶ್ವನಾಥ ಕುರುಡೆ, ಶರಣಗೌಡ ಪಾಟೀಲ, ನಿವೃತ್ತ ಶಿಕ ಸಿದ್ದಣ್ಣ ಅಂಜುಟಗಿ, ನಿಂಗನಗೌಡ ಬಿರಾದಾರ ಉಪಸ್ಥಿತರಿದ್ದರು.