

ಇಂಡಿ: ಹವಾಮಾನ ವೈಪರಿತ್ಯದಿಂದ ಹಣ್ಣಿನ ಬೆಳೆಗಳಿಗೆ ಹಾನಿಯಾದರೆ ರೈತರಿಗೆ ತೊಂದರೆಯಾಗಬಾರದೆಂದು ಸರ್ಕಾರ ವಿಮೆ ಯೋಜನೆ ಜಾರಿಗೆ ತಂದಿದೆ. ರೈತರು ಸಕಾಲದಲ್ಲಿ ವಿಮಾ ಕಂತು ಪಾವತಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಮನವಿ ಮಾಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಂಬೆ, ದಾಳಿಂಬೆ ಬೆಳೆಗೆ ವಿಮಾ ನೋಂದಣಿಗೆ ಜೂ.30 ಕೊನೆ ದಿನ, ದ್ರಾ ಬೆಳೆಗೆ ಸೆಪ್ಟೆಂಬರ್ 15 ಕೊನೆ ದಿನವಾಗಿದೆ. ಈ ಅವಧಿಯೊಳಗಾಗಿ ರೈತರು ವಿಮಾ ಕಂತು ಪಾವತಿಸಿ, ತಮ್ಮ ಬೆಳೆ ಭದ್ರಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ದಾಳಿಂಬೆ ಬೆಳೆ ಪ್ರತಿ ಹೆಕ್ಟರ್ ಪ್ರದೇಶಕ್ಕೆ ವಿಮಾ ಮೊತ್ತ 6350 ರೂ ಇದ್ದು, ಈ ವಿಮಾ ಅನ್ವಯಿಸುವ ಅವಧಿ ಜು.1ರಿಂದ ಡಿಸೆಂಬರ್ 31ರ ವರೆಗೆ ಆಗಿರುತ್ತದೆ.
ನಿಂಬೆ ಬೆಳೆಗೆ ಪ್ರತಿ ಹೆಕ್ಟರ್ ಪ್ರದೇಶಕ್ಕೆ 2800 ವಿಮಾ ಮೊತ್ತವಿದ್ದು. ವಿಮಾ ಅನ್ವಯಿಸುವ ಅವಧಿ ಜು.1ರಿಂದ ಡಿಸೆಂಬರ್ 31ರ ವರೆಗೆ ಆಗಿರುತ್ತದೆ.
ಅದರಂತೆ ದ್ರಾ ಬೆಳೆಗೆ ಪ್ರತಿ ಹೆಕ್ಟರ್ ಪ್ರದೇಶಕ್ಕೆ ವಿಮಾ ಮೊತ್ತ 14000 ಆಗಿದ್ದು, ವಿಮಾ ಅವಧಿ ಸೆಪ್ಟಂಬರ್16ರಿಂದ 30 ಏಪ್ರಿಲ್ 2026ರ ವರೆಗೆ ಆಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಝೆರಾ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಬ್ಯಾಂಕುಗಳಲ್ಲಿ ವಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.