

ಗೊಳಸಂಗಿ: ಕೃಷಿಕರ ಪಾಲಿನ ಮೊದಲ ಹಬ್ಬವೆಂದೇ ಕರೆಯಲ್ಪಡುವ ಕಾರ ಹುಣ್ಣಿಮೆ ಸಂಭ್ರಮ ಗೊಳಸಂಗಿಯಲ್ಲಿ ಬುಧವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ಗ್ರಾಮದ ಅನ್ನದಾತರು ಎತ್ತುಗಳಿಗೆ ಸ್ನಾನ ಮಾಡಿಸಿ, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮದ ಬಂಗಲೆ ಓಣಿಯಲ್ಲಿ ಸಂಪ್ರದಾಯದಂತೆ ಆಯ್ದ ಮನೆತನಗಳ ಎತ್ತುಗಳನ್ನು ಬರಮಾಡಿಕೊಂಡು ಅಗಸಿಯಲ್ಲಿ ಎತ್ತುಗಳಿಗೆ ಆರತಿ ಮಾಡಿ ಕರಿ ಹರಿಯಲಾಯಿತು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಸೇರಿದ್ದ ಜನಸ್ತೋಮದ ನಡುವೆ ಬಿಳಿ ಎತ್ತು ಕರಿ ಹರಿಯಿತು. ಗ್ರಾಪಂ ಅಧ್ಯ ರಾವುತ ಸೀಮಿಕೇರಿ, ಪ್ರಮುಖರಾದ ತಜಮುಲಖಾದ್ರಿಸಾಹೇಬ ಜಾಗೀರದಾರ, ಶಂಕರಗೌಡ ಪಾಟೀಲ, ಕೇಶವ ಪವಾರ, ಸಂಗಪ್ಪ ಕೋಲಾರ, ಸಿದ್ದು ಸಾಳುಂಕೆ, ಗಜೇಂಡಪ್ಪ ಪರಮಗೊಂಡ, ಕೆಂಚಪ್ಪ ತಳವಾರ, ಗೌಸಪೀರಾ ಜಾಗೀರದಾರ, ಅಮರೇಶಗೌಡ ಪಾಟೀಲ, ಹುಸನಪ್ಪ ಚಿಮ್ಮಲಗಿ, ಬಸಪ್ಪ ಸುರಪುರ ಮತ್ತಿತರರು ಇದ್ದರು.
ಕರಿ ಹರಿಯುವ ವೇಳೆ ಸಂಪ್ರದಾಯದಂತೆ ಅಗಸಿ ಬಳಿ ಎಲ್ಲ ಎತ್ತುಗಳು ಆರತಿ ಬೆಳಗಿಸಿಕೊಂಡ ನಂತರವಷ್ಟೇ ಕರಿ ಹರಿಯಲು ಮುಂದಾಗಬೇಕು. ಆದರೆ ಕೆಲವರ ಎತ್ತುಗಳು ಆರತಿ ಬೆಳಗುವ ಮುಂಚೆಯೇ ಕರಿ ಹರಿಯಲು ಮುಂದಾದಾಗ ಬಹುತೇಕರು ಆೇಪ ವ್ಯಕ್ತಪಡಿಸಿದರು.