ಶುದ್ಧ ಕುಡಿಯುವ ನೀರಿಗೆ ಬರ

Drought for clean drinking water
ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ್ದ ಕುಡಿಯುವ ನೀರಿನ ಟಕ.
Published on

ಬ್ರಹ್ಮದೇವನಮಡು: ಕುಡಿಯುವ ನೀರಿಗಾಗಿ ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಹಳ್ಳಿಯಲ್ಲಿ ಆರ್​.ಒ ಟಕಗಳನ್ನು ಸ್ಥಾಪಿಸಿದೆ. ಆದರೆ ಜನಪ್ರತಿನಿಧಿಗಳ ರ್ನಿಲಕ್ಷ$್ಯದಿಂದ ಅವುಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.

ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಆರ್​.ಒ ಟಕವು ಪ್ರದರ್ಶನಕ್ಕೆ ಇಟ್ಟಂತಾಗಿದೆ. ಈ ಟಕ ಕೆಟ್ಟು ಕೆಲ ವರ್ಷಗಳಾದರೂ ದುರಸ್ತಿ ಯೋಗ ಇನ್ನೂ ಕೂಡಿ ಬಂದಿಲ್ಲ. ಜನಪ್ರತಿನಿಧಿಗಳ ಹಾಗೂ ಗ್ರಾಪಂ ರ್ನಿಲಕ್ಷ$್ಯಕ್ಕೊಳಪಟ್ಟಿದೆ.

ಲಾಂತರ ರೂ.ಖರ್ಚುಮಾಡಿ ಸ್ಥಾಪಿಸಿರುವ ಆರ್​.ಒ ಟಕದ ಯಂತ್ರಗಳು ತುಕ್ಕು ಹಿಡಿದಿವೆ. ಆರ್​.ಒ ಟಕಗಳ ನಿರ್ವಹಣೆ ಜವ್ದಾರಿ ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ. ಗುತ್ತಿಗೆದಾರ ಒಮ್ಮೆಯೂ ಬಂಧು ಭೇಟಿ ನಿಡಿಲ್ಲ. ದುರಸ್ತಿ ಮಾಡಿಸುವ ಗೋಜಿಗೂ ಹೋಗಿಲ್ಲ. ಬಹುಕಾಲ ಬಳಕೆಯಾಗದೇ ಉಳಿದ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರ ಅಳವಡಿಸಬೇಕು. ಇದಕ್ಕೆ ತಗಲುವ ಲಗಟ್ಟಲೆ ಹಣ ಭರಿಸಲು ಯಾರು ಮುಂದಾಗುತ್ತಿಲ್ಲ. ಹೊನ್ನಳ್ಳಿ ಗ್ರಾಮಕ್ಕೆ ಹೋಗಿ ಗ್ರಾಮಸ್ಥರು ಶುದ್ಧ ನೀರು ವಾಹನದಲ್ಲಿ ತರುವಂತಾಗಿದೆ. ಹೊನ್ನಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆಡಳಿತ ಮಂಡಳಿ ಇತ್ತ ಗಮನ ಹರಿಸಿ ಆರ್​.ಒ ಟಕ ಸರಿಪಡಿಸಿ ಜನರಿಗೆ ಶುದ್ಧ್ದ ನೀರಿನ ವ್ಶವಸ್ಥೆ ಮಾಡಬೇಕೆಂದು ಗ್ರಾಮಸ್ಥರಾದ ಮಲ್ಲಿಕಾರ್ಜುನ ಯಲಗೋಡ, ಸಂತೋಷ ಕರಿಕಲ್ಲ, ಅಮೃತ ದೊಡ್ಡಮನಿ, ಬಂದೇನವಾಜ ಸೀತನೂರ, ರಮೇಶ ಪೂಜಾರಿ, ನಾಗೇಶ ಕೊಟ್ರಗಸ್ತಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net