ವಿದ್ಯುತ್​ ಕಂಬ ಅಳವಡಿಕೆಗೆ ಆಗ್ರಹ

Demand for installation of electric poles
ಬಸವನಬಾಗೇವಾಡಿ 17ನೇ ವಾರ್ಡಿನ ನಿವಾಸಿಗಳು ವಿದ್ಯುತ್​ ಕಂಬ ಅಳವಡಿಸುವಂತೆ ಆಗ್ರಹಿಸಿ ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿಗೆ ಮನವಿ ಸಲ್ಲಿಸಿದರು. ರಾಜು ಮುಳವಾಡ, ಸುರೇಶ ಮಿಣಜಗಿ, ನಿಂಗಪ್ಪ ಮಿಣಜಿಗಿ, ಯಲ್ಲಪ್ಪ ಗುಂಡಿ, ಮಲ್ಲು ಮಿಣಜಗಿ, ಗೋಪಾಲ ಕರಮಾಳಕರ, ಮಂಜು ಮಿಣಜಗಿ ಇತರರಿದ್ದರು.
Published on

ಬಸವನಬಾಗೇವಾಡಿ: ನಿರಂತರ ಜ್ಯೋತಿ ವಿದ್ಯುತ್​ ಕಂಬ ಅಳವಡಿಸುವಂತೆ ಆಗ್ರಹಿಸಿ ಪಟ್ಟಣದ 17ನೇ ವಾರ್ಡಿನ ನಿವಾಸಿಗಳು ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಡಾವಣೆ ಮುಖಂಡ ಸುರೇಶ ಮಿಣಜಗಿ, ರಾಜು ಮುಳವಾಡ ಮಾತನಾಡಿ, ಮಿಣಜಗಿ ತೋಟದ ಮನೆಗಳಲ್ಲಿ 40 ಕುಟುಂಬಗಳು ವಾಸಿಸುತ್ತಿದ್ದು, ಈ ನಿವಾಸಿಗಳಿಗೆ ಅನುಕೂಲವಾಗಲೆಂದು ನಿರಂತರ ಜ್ಯೋತಿಗಾಗಿ 27 ವಿದ್ಯುತ್​ ಕಂಬಗಳು ಮಂಜೂರಾಗಿವೆ. ಆದರೆ, ಕೆಲವರು ಈ ಕಂಬಗಳನ್ನು ಬೇರೆಡೆ ಸ್ಥಳಾಂತರಿಸುತ್ತಿದ್ದು, ಇದರಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಸಮಸ್ಯೆಗೆ ಸ್ಪಂದಿಸದಿದ್ದರೆ ಪುರಸಭೆ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಿಂಗಪ್ಪ ಮಿಣಜಿಗಿ, ಯಲ್ಲಪ್ಪ ಗುಂಡಿ, ಮಲ್ಲು ಮಿಣಜಗಿ, ಗೋಪಾಲ ಕರಮಾಳಕರ, ಮಂಜು ಮಿಣಜಗಿ, ರಾಜು ಮಿಣಜಗಿ, ಶೇಕಪ್ಪ ಮಿಣಜಗಿ, ಮಲ್ಲಪ್ಪ ಗುಂಡಿ, ಶಿವಾನಂದ ಮಿಣಜಗಿ, ಪ್ರಕಾಶ ಮಿಣಜಗಿ, ಶರಣಪ್ಪ ಮಿಣಜಗಿ, ಶಂಕ್ರಪ್ಪ ಮಿಣಜಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net