

ನಿಡಗುಂದಿ: ಭಾರತೀಯ ಸೇನೆ ಗಡಿಭದ್ರತಾ ಪಡೆಯಲ್ಲಿ 40 ವರ್ಷ ಸುದೀರ್ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಲಿರುವ ಯೋಧ ಶಿವಾಜಿ ಭಜಂತ್ರಿ ಅಭಿನಂದನಾ ಸಮಾರಂಭ ಭಾನುವಾರ ಅದ್ದೂರಿಯಾಗಿ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಅಂದು ಬೆಳಗ್ಗೆ ಗೌರೀಶ್ವರ ದೇವಸ್ಥಾನದ ಜಿ.ಎಂ ನಾಗಠಾಣ ಕಲ್ಯಾಣ ಮಂಟಪದಲ್ಲಿ ಪಟ್ಟಣದ ಹಿರಿಯರು ಹಾಗೂ ನಿವೃತ್ತ ಯೋಧರ ಸಂ ಮತ್ತು ವಿವಿಧ ಸಂ ಸಂಸ್ಥೆಗಳಿಂದ ಶಿವಾಜಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹೊಸ ಬಸ್ ನಿಲ್ದಾಣದಿಂದ ಜಿ.ಎಂ ನಾಗಠಾಣ ಕಲ್ಯಾಣ ಮಂಟಪದವರೆಗೆ ತೆರೆದ ವಾಹನದಲ್ಲಿ ಭಜಂತ್ರಿ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತಿದೆ. ನಂತರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ.
ರುದ್ರಮುನಿ ಶ್ರೀಗಳು, ಸಿದ್ದಣ್ಣ ನಾಗಠಾಣ, ನಿವೃತ್ತ್ತ ಸೈನಿಕರ ಸಂದ ಅಧ್ಯ ಗೋಪಾಲ ಸಾರವಾಡ ಇತರರು ಪಾಲ್ಗೊಳ್ಳಲಿದ್ದಾರೆ.
ಶಿವಾಜಿ ಭಜಂತ್ರಿ ನಿಡಗುಂದಿ ನಿವಾಸಿಯಾಗಿದ್ದು, 1986ರಲ್ಲಿ 19ನೇ ವಯಸ್ಸಿಗೆ ಭಾರತೀಯ ಸೇನೆ ಗಡಿಭದ್ರತಾ ಪಡೆಯಲ್ಲಿ ಆಯ್ಕೆಗೊಂಡು ದೇಶ ಸೇವೆ ಆರಂಭಿಸಿದರು. ಕಾರ್ಗಿಲ್ ಯುದ್ಧ, ಆಪರೇಷನ್ ಪರಾಕ್ರಮ, ಈಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದರು. ಅವರನ್ನು ಅಭಿನಂದಿಸಲು ನಿಡಗುಂದಿ ಗ್ರಾಮದ ಜನರು ಉತ್ಸುಕರಾಗಿದ್ದಾರೆ.