

ನಾಲತವಾಡ: ಪಟ್ಟಣ ಸೇರಿದಂತೆ ಬಿಜ್ಜೂರ, ಖಾನಾಪುರ, ಕಾನಿಕೇರಿ, ಅಯ್ಯನಗುಡಿ, ಲೊಟಗೇರಿ, ಘಾಳಪೂಜಿ, ವೀರೇಶನಗರ, ನಾಗಬೇನಾಳ, ರಕ್ಕಸಗಿ, ಬಂಗಾರಗುಂಡ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಎತ್ತುಗಳ ಮೆರವಣಿಗೆ ನಡೆಸಿ ಕರಿ ಹರಿಯಲಾಯಿತು.
ಬುಧವಾರ ಸಂಜೆ ದೇಶಮುಖರ ಓಣಿ, ನಾಡಗೌಡ ಓಣಿ, ಖಾನ ಬಾವಿ ಓಣಿ, ಗುಡಿ ಓಣಿ, ರಡ್ಡೇರ ಪೇಟೆ ಸೇರಿದಂತೆ ಇನ್ನಿತರ ಕಡೆಗೆಗಳಲ್ಲಿ ಎತ್ತುಗಳ ಮೆರವಣಿಗೆ ಮಾಡುವ ಮೂಲಕ ರೈತರು ಸಂಭ್ರಮಿಸಿದರು. ಕರಡಿ ಮಜಲು, ಬಾಜಾ ಮೇಳ, ಹಲಗೆ ಮೇಳ ಮೆರವಣಿಗೆಗೆ ಮೆರಗು ತಂದಕೊಟ್ಟವು.