

ಗೊಳಸಂಗಿ: ಸೈಬರ್ ಕೆಂನಲ್ಲಿ ಮೋಸ ಹೋಗುವುದರಲ್ಲಿ ಗೊಳಸಂಗಿ ಗ್ರಾಮ ಅಗ್ರಸ್ಥಾನ ಪಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗ್ರಾಮಸ್ಥರು ಮೊಬೈಲ್ನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಕೂಡಗಿ ಎನ್ಟಿಪಿಸಿ ಠಾಣೆಯ ಬೀಟ್ ಪೊಲೀಸ್ ಬಸವರಾಜ್ ಮುಕಾರ್ತಿಹಾಳ ಸಲಹೆ ನೀಡಿದರು.
ಇಲ್ಲಿನ ರಾ.ಅ.ದಳವಾಯಿ ಪ್ರೌಢಶಾಲೆ ಆವರಣದಲ್ಲಿ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಯೋಗ ದಿನಾಚರಣೆ ನಿಮಿತ್ತ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಮೋಸ, ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಗೊಳಸಂಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದು ಆತಂಕಕಾರಿ ಸಂಗತಿ. ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಆನ್ಲೈನ್ಬೆಟ್ಟಿಂಗ್ ದಂಧೆ, ಹಣ ದುಟ್ಟಪ್ಪು ಮಾಡುವುದಾಗಿ ಅಪರಿಚಿತ ಕರೆಗಳು ಬಂದರೆ ಯಾಮಾರಬಾರದು. ಓದುವ ಮಕ್ಕಳ ಕೈಗೆೆ ಮೊಬೈಲ್ ಕೊಟ್ಟು ಅವರ ಭವಿಷ್ಯ ಹಾಳು ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ಬೆಂಗಳೂರಿನ ಋಷಿ ಪ್ರಭಾಕರ ವಿದ್ಯಾಕೇಂದ್ರದ ಯೋಗಾಚಾರ್ಯ ದಯಾಸಾಗರ ಉಪಾಧ್ಯೆ ಅವರು ಶರೀರ ಸಡಿಲ ಕ್ರಿಯೆ, ಪವನ ಮುಕ್ತಾಸನ, ಭುಜಂಗಾಸನ, ಧನುರಾಸನ, ಶಲಭಾಸನ, ವಕ್ರಾಸನ, ಜೋಡಿ ಯೋಗ, ಪ್ರಾಣಾಯಾಮಗಳಾದ ಬಸ್ತಿಕಾ, ಅನುಲೋಮ ವಿಲೋಮ, ಭ್ರಾಮರಿ, ಧ್ಯಾನದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಶೇಂಗಾ, ಮಳಕೆಕಾಳು ವ್ಯವಸ್ಥೆ:
ಯೋಗ ಶಿಬಿರಾರ್ಥಿಗಳಿಗೆ ನೆನೆಸಿದ ಶೇಂಗಾ, ಮಳಕೆಕಾಳುಗಳು ಹಾಗೂ ಲು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ನಾಲ್ಕು ದಿನ ಪೂರೆಸಲಿರುವ ಯೋಗ ಬುಧವಾರ ಸಮಾರೋಪಗೊಳ್ಳಲಿದೆ. ಸಮಾರೋಪದ ಸಾನ್ನಿಧ್ಯವನ್ನು ಹುಚ್ಚಯ್ಯಸ್ವಾಮಿ ದೇವಾಂಗಮಠ ವಹಿಸುವರು. ಶಿಣ ಸಂಸ್ಥೆ ಅಧ್ಯ ಶೇಖರ ದಳವಾಯಿ ಅಧ್ಯತೆ ವಹಿಸುವರು. ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸತೆ ಶ್ರೀರಾ ಉಪಾಧ್ಯೆ, ಗ್ರಾಪಂ ಅಧ್ಯ ರಾವುತ ಸೀಮಿಕೇರಿ, ಪತ್ರಕರ್ತ ಡಿ.ಬಿ.ಕುಪ್ಪಸ್ತ ಉಪಸ್ಥಿತರಿರುವರು.