

ತಾಳಿಕೋಟೆ : ಬಕ್ರೀದ್ ಪ್ರಯುಕ್ತ ಪಟ್ಟಣದ ಹೊಸ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಧಾರ್ಮಿಕ ಮುಖಂಡ ಡಾ.ಮಿನಹಾಜುದ್ದೀನ ಖಾಜಿ ಮಾತನಾಡಿ, ಬಕ್ರೀದ್ ಹಬ್ಬವು ಸಹೋದರತೆ ಮತ್ತು ಸಾಮರಸ್ಯೆ ಭಾವನೆ ಬೆಸೆಯುವ ಸಂಕೇತವಾಗಿದೆ ಎಂದರು. ಪ್ರವಾದಿ ಮಹ್ಮದರ ಆದರ್ಶಅನುದಿನ ಅನುಸರಿಸಿ, ಕೆಡುಕುಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧಾರ್ಮಿಕ ಮುಖಂಡ ಸಯ್ಯದ್ ಶಕೀಲ್ ಅಹಮದ್ ಖಾಜಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.
ಹಫೀಜ ಇಬ್ರಾಹಿಂ ಮುಲ್ಲಾ, ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಅಬ್ದುಲ್ ರೆಹಮಾನ್ ಎಕೀನ, ಅಲ್ಲಾಭ ನಮಾಜಕಟ್ಟಿ ಸಿಕಂದರ ವಠಾರ, ರಾಜ ಅಹ್ಮದ್ ಒಂಟಿ, ಅಬ್ದುಲ್ ರಜಾಕ್ ಮನಗೂಳಿ, ಮಹೆಬೂಬ ಚೋರಗಸ್ತಿ, ಕೆ.ಐ.ಸಗರ,ಎಂ.ಎ. ಮೇತ್ರಿ, ರೋಷನ್ ಡೋಣಿ, ಅಬ್ದುಲ್ ಸತ್ತಾರ ಅವಟಿ, ಇಬ್ರಾಹಿಂ ಮನ್ಸೂರ, ಹಸನ್ ಮನಗೂಳಿ, ಅಬ್ದುಲ್ ರೆಹಮಾನ್ ನಮಾಜಕಟ್ಟಿ, ಡಾ.ಎ.ಎ.ನಾಲಬಂದ, ಚಂದಾಹುಸೇನ ಖಾಂಜಾದೆ,ಎಸ್.ಎ.ನಾಲಬಂದ, ಹಸನ ಸಾಬ ಕೊರ್ಕಿ, ಮುಸ್ತಾ ಚೌಧರಿ, ಮುಜಾಹೀದ ನಮಾಜಕಟ್ಟಿ ಪಾಲ್ಗೊಂಡಿದ್ದರು.