

ನಿಡಗುಂದಿ: ಭಾರತೀಯ ಗಡಿಭದ್ರತಾ ಪಡೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ವೀರ ಯೋಧ ಶಿವಾಜಿ ಬಸಪ್ಪ ಭಜಂತ್ರಿ ಅವರನ್ನು ನಿಡಗುಂದಿಯಲ್ಲಿ ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 8ಕ್ಕೆ ಆಗಮಿಸಿದ ಶಿವಾಜಿ ಅವರನ್ನು ಮಾಜಿ ಸೈನಿಕರು ಹಾಗೂ ವಿವಿಧ ಸಂ ಸಂಸ್ಥೆಗಳ ಮುಖಂಡರು, ರಾಜಕೀಯ ಗಣ್ಯರು ಹೂಮಾಲೆ ಹಾಕಿ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಶಿವಾಜಿ ದಂಪತಿಗಳ ಮೆರವಣಿಗೆ ನಡೆಸಲಾಯಿತು.
ಶಿವಾಜಿ ಅವರು, ತಮ್ಮ ಕುಟುಂಬದ ಜತೆಯಲ್ಲಿ ತೆರೆದ ವಾಹನದಲ್ಲಿ ನಿಂತು ಜನರಿಗೆ ಕೈಮುಗಿದು ಕೃತತೆ ಸಲ್ಲಿಸಿದರು. ಭಾರತ ಮಾತಾಕೀ ಜೈ, ಜೈವಾನ್, ವಂದೇ ಮಾತರಂ ಸೇರಿದಂತೆ ಹಲವು ರಾಷ್ಟ್ರಪ್ರೇಮದ ೂಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು.
ಗೌರೀಶ್ವರ ದೇವಸ್ಥಾನದ ಜಿ.ಎಂ ನಾಗಠಾಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖಂಡರು, ಮಾಜಿ ಸೈನಿಕರು, ವಿವಿಧ ಸಂಟನೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೂವಿನ ಹಾರ ಹಾಕಿ ಗೌರವಿಸಿದರು.
ಶಿಣ ಪ್ರೇಮಿ ಸಿದ್ಧಣ್ಣ ನಾಗಠಾಣ ಮಾತನಾಡಿ, ದೇಶ ಕಾಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೇಶ ಕಟ್ಟುವ ಕಾಯಕ ಹಾಗೂ ದೇಶದ ರಣೆಗೆ ನಾವು ಸದಾ ಸಿದ್ಧವಾಗಬೇಕು. ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕು. 40 ವರ್ಷ ದೇಶ ಸೇವೆ ಸಲ್ಲಿಸಿದ ಶಿವಾಜಿ ಭಜಂತ್ರಿ ಅವರ ಸೇವೆ ಶ್ಲಾನೀಯ ಎಂದರು.
ನಿವೃತ್ತ್ತ ಪ್ರಾಧ್ಯಾಪಕ ಶ್ರೀಶೈಲಪ್ಪ ರೇವಡಿ ಮಾತನಾಡಿ, ದೇಶದ ರಣೆಗಾಗಿ ಸೈನಿಕರು ತಮ್ಮ ಜೀವನ ಪಣವಾಗಿಟ್ಟು ರಾಷ್ಟ್ರವನ್ನು ಕಾಯುತ್ತಿರುವುದರಿಂದ ನಾವೆಲ್ಲರೂ ಸಂತೋಷದಿಂದ ಬದುಕುತ್ತಿದ್ದೇವೆ. ಶಿವಾಜಿ ಭಜಂತ್ರಿ ಅವರು, ಕಾರ್ಗಿಲ್ ಯುದ್ಧ ಸೇರಿದಂತೆ ಈಚೆಗಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ದೇಶಪ್ರೇಮ ನಮಗೆಲ್ಲ ಮಾದರಿಯಾಗಿದೆ ಎಂದರು.
ತಾಲೂಕು ಮಾಜಿ ಸೈನಿಕರ ಸಂದ ಅಧ್ಯ ಆರ್.ವೈ.ಹಿರೇಮಠ, ಕಸಾಪ ತಾಲೂಕಾಧ್ಯ ಸಂಗಮೇಶ ಕೆಂಭಾವಿ, ಯಾಸಿನ್ ಮುಲ್ಲಾ ಮಾತನಾಡಿದರು. ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಕೃಷ್ಣಾ ಕಾಡಾ ಮಾಜಿ ಅಧ್ಯ ಬಸವರಾಜ ಕುಂಬಾರ, ಪ.ಪಂ ಸದಸ್ಯ ಶಿವಾನಂದ ಮುಚ್ಚಂಡಿ, ಮಾಜಿ ಅಧ್ಯ ಸಂಗಮೇಶ ಬಳಿಗಾರ, ಮುಖಂಡರಾದ ಬಸಯ್ಯ ಸಾಲಿಮಠ, ಎಸ್.ಕೆ ಗೌಡರ, ಶೇಖರ ರೂಡಗಿ, ನಿವೃತ್ತ ಸೈನಿಕರ ಸಂದ ತಾಲೂಕಾಧ್ಯ ಗೋಪಾಲ ಸಾರವಾಡ, ಉಪಾಧ್ಯ ಹೊಳೆಬಸಪ್ಪ ಮಣಹಳ್ಳಿ, ಭೀಮಣ್ಣ ವಿಭೂತಿ, ಸಿದ್ರಾಮೇಶ ಅರಮನಿ, ಜಿ.ಎನ್.ಯಲಗೂರ, ಶೇಖಪ್ಪ ಹಳೆಮನಿ, ಜಿ.ಎಂ ಅಂಗಡಿ ಪಾಲ್ಗೊಂಡಿದ್ದರು.