ಹಿರೇಮಣೂರದಲ್ಲಿ ಯಲ್ಲಮ್ಮ ದೇವಿ ಜಾತ್ರೆ

Yellamma Devi Fair in Hiremanur
ಮಣೂರ ಯಲ್ಲಮ್ಮಾ ದೇವಿ
Published on

ಇಂಡಿ: ಸಮೀಪದ ಹಿರೇಮಣೂರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರೆ ಮೇ 10 ರಿಂದ 16 ರ ವರೆಗೆ ಜರುಗಲಿದೆ.

10 ರಂದು ಸಂಜೆ ಶಿವಬಾಳನಗರದ ಭಕ್ತರಿಂದ ವಿವಿಧ ವಾದ್ಯ ಮೇಳಗಳೊಂದಿಗೆ ನಂದಿಕೋಲ ಮೆರವಣೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಿ ಮಂದಿರಕ್ಕೆ ಆಗಮಿಸುವದು.

11 ರಂದು ಯಲ್ಲಮ್ಮದೇವಿ ಬಾಸಿಂಗ ಮೆರವಣೆಗೆ ನಡೆದು ರಾತ್ರಿ 9ಕ್ಕೆ ಮಂದಿರಕ್ಕೆ ಆಗಮಿಸಲಿದೆ. ರಾತ್ರಿ 10.30ಕ್ಕೆ ಪ್ರೇಮಾ ಅಜಲಪುರ ಹಾಗೂ ಸಂಗಡಿಗರಿಂದ ಚೌಡಕಿ ಪದಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

12 ರಂದು ಬೆಳಗ್ಗೆ 5ಕ್ಕೆ ಪಡಸಾವಳಗಿ ಮಠದ ಡಾ.ಶಂಭುಲಿಂಗ ಶಿವಾಚಾರ್ಯರು ದೇವಿಯ ರುದ್ರಾಭಿಷೇಕ ನೆರವೇರಿಸುವರು. ಬೆಳಗ್ಗೆ ಸ್ರ್ತಾಭರಣ, 9ಕ್ಕೆ ದೇವಿಗೆ ನೈವೇದ್ಯ ಅರ್ಪಣೆ, ದೇವಿಯ ಪಲ್ಲಕ್ಕಿ ಮೆರವಣೆಗೆ, ಬಾಸಿಂಗ ಮೆರವಣೆಗೆ, ದೇವಿಯ ಪಲ್ಲಕ್ಕಿ ಸ್ವಾಗತಿಸಲಾಗುತ್ತಿದೆ.ಮದ್ದು ಸುಡುವ ಕಾರ್ಯಕ್ರಮ. ನಂತರ ಪಲ್ಲಕ್ಕಿ ಮೆರವಣೆಗೆ ಗ್ರಾಮದಲ್ಲಿರುವ ದೇವಿಯ ಮಂದಿರಕ್ಕೆ ಆಗಮಿಸಲಿದೆ.

12 ರಿಂದ 16 ರ ವರೆಗೆ ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಜಾನುವಾರುಗಳಿಗೆ ಹಾಗೂ ಕುರಿಗಳ ಭವ್ಯ ಜಾತ್ರೆ ನಡೆಯಲಿದೆ. 13 ರಂದು ಬೆಳಗ್ಗೆ 9ಕ್ಕೆ ಸುರೇಶ ಕಂಬಾಗಿ, ರೇಖಾ ಗೊಲಬಾವಿ ಅವರಿಂದ ಗೀ ಗೀ ಪದಗಳ ಕಾರ್ಯಕ್ರಮ. ಜಂಗಿ ಕುಸ್ತಿಗಳು ನಡೆಯಲಿವೆ.

ಜಾನುವಾರು ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ ಕಮಿಟಿ ವತಿಯಿಂದ 16 ರಂದು ಬಹುಮಾನ ವಿತರಿಸಲಾಗುವದು ಎಂದು ಯಲ್ಲಮ್ಮ ದೇವಿಯ ಚಾರಿಟೇಬಲ್​ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net