ಆಧ್ಯಾತ್ಮದಿಂದಲೇ ವಿಶ್ವಶಾಂತಿ ಸಾಧ್ಯ

World peace is possible only through spirituality.
ಏಳಗಿ (ಪಿಎಚ್​) ಗ್ರಾಮದಲ್ಲಿ ಶ್ರೀವಿರಭದ್ರೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಶಾಸಕ ವಿಠ್ಠಲ ಕಟಕಧೋಂಡ ಉದ್ಘಾಟಿಸಿದರು.ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಗುರುಪಾದೇಶ್ವರ ಶಿವಾಚಾರ್ಯರು, ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಇತರರಿದ್ದರು.
Published on

ಹೋರ್ತಿ: ಆಧ್ಯಾತ್ಮದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.

ಏಳಗಿ (ಪಿಎಚ್​) ಗ್ರಾಮದಲ್ಲಿ ಶ್ರೀ ವಿರಭದ್ರೇಶ್ವರ ಜಾತ್ರೆ ಹಮ್ಮಿಕೊಮಡಿದ್ದ ನಿಮಿತ್ತ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆ &ಉತ್ಸವಗಳು ಸನ್ಮಾರ್ಗ ತೋರುವ ತೋರುತ್ತವೆ ಎಂದರು.

ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಗುರುಪಾದೇಶ್ವರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಡವಲಾಗದ ಚಳಕಾಪುರ ಸಿದ್ದಾರೂಢಮಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತದ್ದೇವಾಡಿಯ ಮಹಾಂತೇಶ ಹಿರೇಮಠ ಶಾಸ್ತ್ರಿಗಳು, ವಿಧಾನ ಪರಿಷತ್​ ಮಾಜಿ ಸದಸ್ಯ ಬಿ ಜಿ. ಪಾಟೀಲ್​, ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ, ಹೊರ್ತಿ ಶಾಂತೇಶ್ವರ ಸಹಕಾರಿ ಸಂದ ಅಧ್ಯ ಶ್ರೀಮಂತ ಇಂಡಿ, ವಿಜಯಪುರ ಬಂಜಾರ ಶಿಣ ಸಂಸ್ಥೆ ಅಧ್ಯ ಡಿ.ಎಲ್​.ಚವ್ಹಾಣ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯ ಎಂ.ಆರ್​. ಪಾಟೀಲ, ನಾಗೇಂದ್ರ ಬಿರಾದಾರ, ಶಶಿಧರ ಕಲ್ಯಾಣಶೆಟ್ಟಿ, ಅಶೋಕ ಕುಲಕರ್ಣಿ, ಧನರಾಜ ಮುಜಗೊಂಡ, ಚಂದ್ರಕಾಂತ ರಾಂಪುರ, ಸಾಹೇಬಗೌಡ ಬಿರಾದಾರ, ತುಕಾರಾಮ ಬೇಗಾರ, ಅಶೋಕಗೌಡ ಪಾಟೀಲ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net