

ಗೊಳಸಂಗಿ: ವರುಣದೇವನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಬುದ್ನಿ ಗ್ರಾಮಸ್ಥರು ಮಂಗಳವಾರ ಗ್ರಾಮದೇವತೆ ಸೇರಿ ಎಲ್ಲ ದೇವರಿಗೆ ಉಡಿ ತುಂಬುವ ಮೂಲಕ ಹರಕೆ ಸಲ್ಲಿಸಿದರು.
ಗ್ರಾಮದ ಹೊರ ವಲಯದ ಯಾತಗೇರಿ ತೋಟದಲ್ಲಿ ಗಂಗಾಸ್ನಾನದೊಂದಿಗೆ ಗ್ರಾಮದೇವತೆಯ ಮೆರವಣಿಗೆ ನಡೆಯಿತು. ನಂತರ ಗ್ರಾಮದ ಎಲ್ಲ ದೇವರಿಗೆ ಉಡಿ ತುಂಬಿ, ನೈವೇದ್ಯ ಸಮರ್ಪಿಸಿ ಸಕಾಲಕ್ಕೆ ಮಳೆ ಕರುಣಿಸು ಎಂದು ಸಾಮೂಹಿಕ ಪ್ರಾರ್ಥಿಸಿದರು. ಪಾಲೊಂಡ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಮುಖರಾದ ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ವೀರೇಶ ಮಮ್ಮದಕೋಟಿ, ಯಲ್ಲಪ್ಪ ಗುಣಕಿ, ಸಿದ್ದಪ್ಪ ಮೆಳ್ಳಿ, ರೇವಣಸಿದ್ದ ವಾಲಿಕಾರ, ಯಮನಪ್ಪ ಅಚನೂರ, ಗುಣ್ಣಯ್ಯಸ್ವಾಮಿ ಹಿರೇಮಠ, ಮಲ್ಲೇಶಿ ಮೇಲಿನಮನಿ, ಮುತ್ತಪ್ಪ ಮಾದರ, ಸಿದ್ದಪ್ಪ ಮೇಲಿನಮನಿ ಪಾಲ್ಗೊಂಡಿದ್ದರು.