ವಿಜಯವಾಣಿ ಕಾರ್ಯವೈಖರಿ ಶ್ಲಾನೀಯ

Vijayavani is preserving and nurturing Akshara Sansathi
ವಿಜಯಪುರ ನಗರದ ಬಿಎಲ್​ಡಿಇ ಸಂಸ್ಥೆಯ ಎ.ಎಸ್​. ಪಾಟೀಲ್​ ವಾಣಿಜ್ಯ ಮಹಾವಿದ್ಯಾಲಯದ ಐವತ್ತಕ್ಕೂ ಅಧಿಕ ವಿದ್ಯಾರ್ಥಿ ವಿಜಯವಾಣಿ ಪತ್ರಿಕೆ ಕಚೇರಿಯ ಮುದ್ರಣ ವಿಭಾಗ ವೀಸಿದರು.
Published on

ವಿಜಯಪುರ : ವಿಜಯವಾಣಿ ಕೇವಲ ಮುದ್ರಣ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ಬಿಎಲ್​ಡಿಇ ಸಂಸ್ಥೆಯ ಎ.ಎಸ್​. ಪಾಟೀಲ್​ ವಾಣಿಜ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಮುರುಗೇಶ ಪಟ್ಟಣಶೆಟ್ಟಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎ.ಎಸ್​. ಪಾಟೀಲ್​ ವಾಣಿಜ್ಯ ಮಹಾವಿದ್ಯಾಲಯದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ವಿಜಯವಾಣಿ ಪತ್ರಿಕೆಯ ಕಚೇರಿ ಮತ್ತು ಮುದ್ರಣ ವಿಭಾಗಕ್ಕೆ ಭೇಟಿ ನೀಡಿ, ಸುದ್ದಿಮನೆಯ ಕಾರ್ಯವೈಖರಿಯನ್ನು ಅವಲೋಕಿಸಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಓದುವುದನ್ನೇ ಮರೆತ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಓದಿನ ಅಭಿರುಚಿ ಮೂಡಿಸುವ ಜೊತೆಗೆ ಅವರಿಗೆ ದೈನಂದಿನ ವಿದ್ಯಾಮಾನಗಳ ಪರಿಪೂರ್ಣ ಮಾಹಿತಿಯನ್ನು ಪತ್ರಿಕೆ ನೀಡುವ ಮೂಲಕ ಅಕ್ಷರ ಸಂಸತಿಯನ್ನು ಉಳಿಸಿ, ಬೆಳೆಸುವತ್ತ ಗಮನಹರಿಸಿರುವುದು ಶ್ಲಾನೀಯ ಎಂದರು.

ವಿಜಯವಾಣಿ ವಿಜಯಪುರ ಬ್ಯುರೋ ಸ್ಥಾನಿಕ ಸಂಪಾದಕ ಕೆ.ಎನ್​. ರಮೇಶ್​ ಮಾತನಾಡಿ, ಮೊಬೈಲ್​, ಕಂಪ್ಯೂಟರ್​ ಹಾವಳಿಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದನ್ನು ಗಮನಿಸಿ "ವಿಜಯವಾಣಿ ದರ್ಶನ' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳನ್ನು. ಸಂ&ಸಂಸ್ಥೆಯ ಸದಸ್ಯರನ್ನು ವಿಜಯವಾಣಿ ಪತ್ರಿಕೆ ಕಚೇರಿಗೆ ವಿಆರ್​ಎಲ್​ ಸೂಪರ್​ ಬಸ್​ನಲ್ಲಿ ಕರೆತಂದು ಅವರಿಗೆ ಸುದ್ದಿಮನೆಯಲ್ಲಿ ನಿತ್ಯ ನಡೆಯುವ ಎಲ್ಲಾ ವಿದ್ಯಮಾನಗಳನ್ನು ತಿಳಿಸಿಕೊಡುವುದರೊಂದಿಗೆ ಅವರಲ್ಲಿ ಜ್ಞಾನ ವೃದ್ಧಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮವು ಅಲ್ಪ ಸಮಯದಲ್ಲಿಯೇ ಅಪಾರ ಜನಪ್ರಿಯತೆ ಗಳಿಸಿದೆ. ಕಚೇರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಕಲಿತು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ನಂತರ ವಿದ್ಯಾರ್ಥಿಗಳು ಪತ್ರಿಕಾಲಯದಲ್ಲಿ ಸುದ್ದಿಗಳ ಸಂಗ್ರಹಣೆ, ಸಂಪಾದನೆ, ಪುಟ ವಿನ್ಯಾಸ, ಜಾಹಿರಾತು, ಪ್ರಸರಣ ವಿಭಾಗಗಳ ಸಂಪೂರ್ಣ ಕಾರ್ಯವಿಧಾನವನ್ನು ಅರಿತುಕೊಂಡರು. ನಂತರ ಅವರನ್ನು ವಿಆರ್​ಎಲ್​ ಸೂಪರ್​ ಬಸ್​ನಲ್ಲಿ ವಿಜಯವಾಣಿ ಮುದ್ರಣ ವಿಭಾಗಕ್ಕೆ ಕರೆದುಕೊಂಡು ಹೋಗಿ ಮುದ್ರಣದ ಹಿಂದಿರುವ ತಾಂತ್ರಿಕ ಟಕದ ದರ್ಶನ ಮಾಡಿಸಲಾಯಿತು.

ಮುದ್ರಣ ವಿಭಾಗದ ಡಿಜಿಎಂ (ಉತ್ಪಾದನೆ) ರಾಜೀವಗೌಡ ಎಸ್​. ಕರಿಗೌಡ್ರ ವಿದ್ಯಾರ್ಥಿಗಳಿಗೆ ಪ್ಲೇಟ್​ ಮೇಕಿಂಗ್​, ಕಲರ್​ ಕಾಂಬಿನೇಷನ್​, ಮುದ್ರಣ ಮುಂತಾದ ವಿಷಯಗಳ ಪೂರ್ಣ ಮಾಹಿತಿ ಒದಗಿಸಿದರು. ಮುದ್ರಣ ಉಸ್ತುವಾರಿ ಮಂಜುನಾಥ್​ ಬಿ. ಜಾಹೀರಾತು ವಿಭಾಗದ ನಿಖಿಲ್​ ಹೊಳ್ದೂರ, ಪ್ರಸರಣ ವಿಭಾಗದ ಮುಖ್ಯಸ್ಥ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net