ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ

This will strive for the all-round development of the country.
ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕ ಯಶವಂತರಾಯಗೌಡ ಪಾಟೀಲ ನೂತನ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕ್ಕೆ ಭೂಮಿ ಪೂಜೆ ನೆರವೇರಿಸಿದರು.
Published on

ಇಂಡಿ: ಮತೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ಗುರಿಯಾಗಿದ್ದು, ನನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ ಸಂತೃಪ್ತಿ ನನಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಮಂಗಳವಾರ ಇಂಡಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ 2 ಕೋಟಿ ರೂ.ವೆಚ್ಚದ ಹೊಸ ಪ್ರವಾಸಿ ಮಂದಿರದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಕಟ್ಟಡಕ್ಕೆ 2 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ವಿಐಪಿ ಗಳಿಗಾಗಿ 5 ಸುಸಜ್ಜಿತ ಕೊಠಡಿಗಳನ್ನೊಳಗೊಂಡು ಅಡುಗೆ ಮನೆ ಮತ್ತು ಇನ್ನಿತರ ಸೌಲಭ್ಯಗಳನ್ನು ಹೊಂದಲಿದೆ. ವಿಐಪಿಗಳಿಗಾಗಿ ಕಟ್ಟಲಾಗುವ ಈ ಕಟ್ಟಡದ ಕೆಳಗಿನ ಭಾಗದಲ್ಲಿ ಸುಸಜ್ಜಿತವಾದ ಮೀಟಿಂಗ್​ ಹಾಲ್​ ಹೊಂದಲಿದೆ ಎಂದರು.

ಪುರಸಭೆ ಅಧ್ಯ ಲಿಂಬಾಜಿ ರಾಠೋಡ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಅಪ್ಪಾಸಾಹೇಬ ತಾಂಬೆ, ಸತೀಶ ಕುಂಬಾರ, ರುಕ್ಮುದ್ದಿನ್​ ತದ್ದೇವಾಡಿ, ಜಾವೀದ ಮೋಮಿನ್​ ಸದಾಶಿವ ಪ್ಯಾಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net