

ತಾಳಿಕೋಟೆ: ವಿವಿಧ ಬೇಡಿಕೆ ಈಡೇರಿಕೆಗಾಗಿ ಪೌರ ಕಾರ್ಮಿಕರು ಪುರಸಭೆ ಕಚೇರಿಯ ಮುಂದೆ ಮಂಗಳವಾರ ಮುಷ್ಕರ ನಡೆಸಿದರು. ಸರ್ಕಾರವು ಪೌರ ನೌಕರರಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಸಿದ್ದಲಿಂಗಯ್ಯ ಚೊಂಡಿಪಾಟೀಲ, ಸುರೇಶ ಅಂಬ್ರಣ್ಣವರ,ಶ್ರೀಪಾದ ಜೋಶಿ,ಶಂಕರಗೌಡ ಬಿರಾದಾರ, ಸಿದ್ದು ಕೊಳ್ಳಿ, ಶಿವಾನಂದ ಜುಮನಾಳ, ಆರ್.ಐ.ಪೊಲೀಸ್ಪಾಟೀಲ, ಸಂದೀಪ ವಠಾರ, ಐ.ಎಚ್.ಮಕಾಂದಾರ, ಡಿ.ಬಿ.ಜಾನ್ವೇಕರ, ಪ್ರದಿಪ ಶಿವಶರಣ, ಪ್ರಭು ನಾಲತವಾಡ, ಆನಂದ ನಾಯಕ, ಫೀರೋಜ ಮುಲ್ಲಾ, ರಂಗನಾಥ ಅಜಮನಿ ಪಾಲ್ಗೊಂಡಿದ್ದರು.