ಸರ್ಕಾರಿ ಗೌರವದೊಂದಿಗೆ ಯೋಧ ಸಿದ್ದಪ್ಪನ ಅಂತ್ಯಕ್ರಿಯೆ

Soldier Siddappa's funeral with state honors
ಹೃದಯಾಘಾತದಿಂದ ಮೃತಪಟ್ಟ ಬಿಎಸ್​ಎ್​ ಯೋಧ ಸಿದ್ದಪ್ಪ ಮಾದರ ಅವರ ಅಂತ್ಯ ಕ್ರೀಯೆ ತಾಳಿಕೋಟೆ ತಾಲೂಕಿನ ಬಳಗಾನೂರದಲ್ಲಿ ಸರ್ಕಾರಿ ಗೌರವದೊಂದಿಗೆ ನೇರವೇರಿತು.
Published on

ತಾಳಿಕೋಟೆ: ತಾಲೂಕಿನ ಬಳಗಾನೂರ ಗ್ರಾಮದ ಬಿಎಸ್​ಎ್​ ಯೋಧ ಸಿದ್ದಪ್ಪ ಮಾದರ ಅವರು ಗುರುವಾರ ಆಸ್ಸಾಂ ರಾಜ್ಯದ ಅಥರ್ಗಾ ತ್ರಿಪುರಾದಲ್ಲಿ ಸೇವೆಯಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವು ಶನಿವಾರ ಮಧ್ಯಾಹ್ನ 2ಕ್ಕೆೆ ಬಳಗಾನೂರ ಗ್ರಾಮಕ್ಕೆ ಆಗಮಿಸಿತು. ಅಂದೆ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೇರವೇರಿಸಲಾಯಿತು.

33 ವರ್ಷಗಳಿಂದ ಬಿಎಸ್​ಎ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಮಾದರ ಅವರು ಕಳೆದ 1 ತಿಂಗಳ ಹಿಂದೆ ಬಳಗಾನೂರ ಗ್ರಾಮಕ್ಕೆ ಆಗಮಿಸಿ ಕಳೆದ ವಾರವಷ್ಟೇ ಮರಳಿ ಸೇವೆಗೆ ತೆರಳಿದ್ದರು. ಗುರುವಾರ ಮಧ್ಯಾಹ್ನ ಹೃದಯಘಾತ ಉಂಟಾಗಿ ಮೃತಪಟ್ಟಿದ್ದರು.

ಮೃತಯೋಧನ ಪಾರ್ಥಿವ ಶರೀರವು ಶನಿವಾರ ಮದ್ಯಾಹ್ನ 2ಕ್ಕೆ ಗ್ರಾಮಕ್ಕೆ ಆಗಮಿಸಿತು. ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಮುದ್ದೇಬಿಹಾಳ ಶಾಸಕ ಸಿ.ಎಸ್​.ನಾಡಗೌಡ(ಅಪ್ಪಾಜಿ), ಮಾಜಿ ಶಾಸಕ ಎ.ಎಸ್​.ಪಾಟೀಲ(ನಡಹಳ್ಳಿ), ಅಸ್ಕಿ ಪೌಂಡೇಶನ್​ ಅಧ್ಯ ಸಿ.ಬಿ.ಅಸ್ಕಿ, ತಹಸೀಲ್ದಾರ್​ ಡಾ.ವಿನಯಾ ಹೂಗಾರ ಸೇರಿ ಗಣ್ಯರು ಗ್ರಾಮಸ್ಥರು ಅಂತಿಮ ದರ್ಶನ ಮಾಡಿ ಗೌರವ ನಮನ ಸಲ್ಲಿಸಿದರು.

ಪಿ.ಎಸ್​.ಐ. ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್​ಐ ಆರ್​.ಎಸ್​.ಭಂಗಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಿದ್ದಪ್ಪ ಮಾದರಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net