

ಮುದ್ದೇಬಿಹಾಳ: ನಾಗರಬೆಟ್ಟ ಗುಡ್ಡದ ಬಳಿಯ ಆಕ್ಸರ್ಡ್ ಪಾಟೀಲ್ಸ್ ಸಮೂಹ ಶಿಣ ಸಂಸ್ಥೆಯ ಆಕ್ಸರ್ಡ್ ಪಾಟೀಲ್ಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀೆ&1ರಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿರುವ ಅಕೀಲ್ ಅಹ್ಮದ್ ನಾಸೀರ್ ಅಲಿ ನದಾಫ್ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿಣ ಸಚಿವ ಮಧು ಬಂಗಾರಪ್ಪ ಶನಿವಾರ ಸನ್ಮಾನಿಸಿ ಆತನ ಮತ್ತು ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಕೀಲ್ ಅಹ್ಮದ್ ಸರ್ಕಾರಿ ಶಿಕ ದಂಪತಿಯ ಮಗನಾಗಿರುವುದನ್ನು ಅರಿತ ಅವರು ಗ್ರಾಮೀಣ ಭಾಗದ ಶಾಲೆಯೊಂದು ರಾಜ್ಯಮಟ್ಟದ ಸಾಧನೆ ಮಾಡಿರುವುದು ಶ್ಲಾನೀಯ. ರಾಜ್ಯಾದ್ಯಂತ 22 ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 625 ಅಂಕ ಪಡೆದಿರುವುದು ನಮ್ಮ ಶಿಣದ ಗುಣಮಟ್ಟಕ್ಕೆ ಕನ್ನಡಿಯಾಗಿದೆ ಎಂದರು.
ಸಂಸ್ಥೆ ನಿರ್ದೇಶಕ, ಪ್ರೌಢಶಾಲಾ ವಿಭಾಗದ ಉಸ್ತುವಾರಿ ದರ್ಶನಗೌಡ ಪಾಟೀಲ, ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ್ ಅವರನ್ನು ಸಚಿವರು ಎಲ್ಲರ ಪರವಾಗಿ ಸನ್ಮಾನಿಸಿದರು.
ಶಾಸಕ ಸಿ.ಎಸ್. ನಾಡಗೌಡ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಡಿಡಿಪಿಐ ತಸ್ಮೀಮಾಬಾನು ಕೊಲ್ಹಾರ, ಬಿಇಒ ಬಿ.ಎಸ್. ಸಾವಳಗಿ, ತಾಪಂ ಇಒ ನಿಂಗಪ್ಪ ಮಸಳಿ, ಶಿಕರ ಸಂದ ಅಧ್ಯ ಬಿ.ಎಚ್. ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ತುರಡಗಿ, ಶಿಕ ನಾಸೀರ್ಅಲಿ ಪಿಂಜಾರ, ಪುರಸಭೆ ಅಧ್ಯ ಮಹೆಬೂಬ ಗೊಳಸಂಗಿ, ಮುಖಂಡರಾದ ಎಂ.ಬಿ. ನಾವದಗಿ, ಸಂತೋಷ ಚವ್ಹಾಣ ಇತರರಿದ್ದರು.