

ಇಂಡಿ: ತಾಲೂಕಿನಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತೊಗರಿ ಬೆಳೆ ಸಂಪೂರ್ಣ ವಿಲವಾಗಿ ಇಳುವರಿ ಬಂದಿಲ್ಲ. ಸರ್ಕಾರ ಬೆಳೆ ಪರಿಹಾರ ನೀಡಬೇಕೆಂದು ಕರ್ನಾಟಕ ರಣಾ ವೇದಿಕೆ ತಾಲೂಕಾಧ್ಯ ಬಾಳು ಮುಳಜಿ ಆಗ್ರಹಿಸಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಹೆಚ್ಚು ತೊಗರಿ ಬಿತ್ತನೆ ಮಾಡಿದ್ದರು. ನಂತರ ಅಕ್ಟೋಬರ್ ತಿಂಗಳಲ್ಲಿ ಮಳೆ ಕೊರತೆಯಿಂದಹಾಗೂ ಕಳಪೆ ಬೀಜ ವಿತರಿಸಿದ್ದರಿಂದ ತೊಗರಿ ಸಂಪೂರ್ಣ ಹಾನಿಸಂಭವಿಸಿತು. ತೊಗರಿ ಬಿತ್ತಿ ಕೈ ಸುಟ್ಟುಕೊಂಡ ರೈತರಿಗೆ ಸರ್ಕಾರ ಬೆಳೆ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.