

ತಾಳಿಕೋಟೆ: ಮೇ 26 ರಂದು ತಾಳಿಕೋಟೆಯಲ್ಲಿ ಆಚರಿಸಲಾಗುವ ಆಪರೇಷನ್ ಸಿಂಧೂರ ವಿಜಯೋತ್ಸವದಲ್ಲಿ ದೇಶ ಪ್ರೇಮಿಗಳು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅರೆ ಸೈನಿಕ ಪಡೆ ಸಂದ ಅಧ್ಯ ರಾಮನಗೌಡ ಗೊಟಗುಣಕಿ ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26 ರಂದು ಮದ್ಯಾಹ್ನ 3ಕ್ಕೆ ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ವಿಜಯೋತ್ಸವದಲ್ಲಿ ತಾಲೂಕಿನ ಎಲ್ಲ ನಾಗರಿಕರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಮಾಜಿ ಸೈನಿಕರ ಸಂದ ಅಧ್ಯ ಶ್ರೀಪಾಲ ಸಂಗ್ಮಿ ಮಾತನಾಡಿ, ವಿಠ್ಠಲ ಮಂದಿರದಿಂದ ಪ್ರಾರಂಭಗೊಳ್ಳಲಿರುವ ಈ ಯಾತ್ರೆಯು ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹ್ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ್ ಮಾರ್ಗವಾಗಿ ಮರಳಿವಿಠ್ಠಲ ಮಂದಿರದ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆಗೆ ಆಗಮಿಸಲಿದೆ ಎಂದರು.
ಮಾಜಿ ಸೈನಿಕರ ಸಂದ ಉಪಾಧ್ಯ ಎಸ್.ಎಸ್.ಅಂಗಡಿ, ಕಾರ್ಯದರ್ಶಿ ಬಾಪುಗೌಡ ಪಾಟೀಲ, ಗೌರವಾಧ್ಯ ನಾನಾಗೌಡ ಬಿರಾದಾರ, ರಸೂಲ ಮುರಾಳ, ನೀಲಪ್ಪ ವಾಲಿ, ಎನ್.ಎಂ.ಮೇಟಿ, ಎಸ್.ಜಿ.ಬಿರಾದಾರ, ಸಂಬಾಜಿ ಡಿಸಲೆ, ಕೆ.ಟಿ.ಸಜ್ಜನ, ಬಿ.ಎಸ್.ದೋರನಹಳ್ಳಿ, ಸಂಗಣ್ಣ ಪಿರಾಪುರ ಸುದ್ದಿಗೋಷ್ಠಿಯಲ್ಲಿದ್ದರು.