ದೇಶಕ್ಕಾಗಿ ಒಂದು ಹೆಜ್ಜೆ&ತಿರಂಗಾ ಯಾತ್ರೆ'

'One step for the country & Tiranga Yatra'
ಮುದ್ದೇಬಿಹಾಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಎಸ್​. ಪಾಟೀಲ ನಡಹಳ್ಳಿ ಮಾತನಾಡಿದರು. ಜಗದೀಶ ಪಂಪಣ್ಣವರ್​, ಸಂಗಣ್ಣ ಕಟ್ಟಿ, ಡಾ.ವೀರೇಶ ಪಾಟೀಲ, ಪ್ರಭು ಕಡಿ, ವಿಜಯಕುಮಾರ ಬಡಿಗೇರ ಇದ್ದರು.
Published on

ಮುದ್ದೇಬಿಹಾಳ: ಆಪರೇಷನ್​ ಸಿಂಧೂರ ಕಾರ್ಯಾಚರಣೆ ಸ್ಮರಣೀಯವಾಗಿಸಲು, ದೇಶದ ಸೆನಿಕರ ಮನೋಬಲ ಹೆಚ್ಚಿಸಲು ಮೇ 20 ರಂದು ಮುದ್ದೇಬಿಹಾಳದಲ್ಲಿ ಸಮಸ್ತ ನಾಗರಿಕರು, ಸಂ&ಸಂಸ್ಥೆಗಳ ಸಹಯೋಗದೊಂದಿಗೆ ದೇಶಕ್ಕಾಗಿ ಒಂದು ಹೆಜ್ಜೆ& ತಿರಂಗಾ ಯಾತ್ರೆ, ದೇಶಸೇವೆಯಲ್ಲಿರುವ ಹಾಗೂ ಯುದ್ಧ, ಭಯೋತ್ಪಾದಕ ದಾಳಿಗಳಲ್ಲಿ ಹುತಾತ್ಮರಾಗಿರುವ ಸೆನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಸ್ಮರಣಿಕೆ ಸಹಿತ ಸನ್ಮಾನಿಸಿ ಗೌರವಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೆತ ಮೋರ್ಚಾ ರಾಜ್ಯಾಧ್ಯ, ಮಾಜಿ ಶಾಸಕ ಎ.ಎಸ್​. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೆನಿಕರ ಹತ್ತಿರ ಹೋಗಿ ಅಭಿನಂದಿಸಲು ಆಗುವುದಿಲ್ಲ. ಅದರ ಬದಲು ಅವರ ಪತ್ನಿ, ತಾಯಿ, ತಂದೆ ಅಥವಾ ಕುಟುಂಬದ ಒಬ್ಬರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.

ಈಗಾಗಲೇ 25&30 ಮಾಜಿ ಸೈನಿಕರು ಸೇವೆಯಲ್ಲಿರುವ ಮತ್ತು ಹುತಾತ್ಮರಾದ ಸೆನಿಕರ ವಿವರ, ಕುಟುಂಬದ ಮಾಹಿತಿ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಆಹ್ವಾನಿಸಿದ್ದಾರೆ. 250 ಜನರನ್ನು ಸನ್ಮಾನಿಸುವ ಗುರಿ ಇದೆ. ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಅಂದು ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸನ್ಮಾನಕ್ಕೂ ಮುನ್ನ ಹಳೇ ತಹಸೀಲ್ದಾರ್​ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನದಿಂದ ಬಸವೇಶ್ವರ ವೃತ್ತ್ತ ಮಾರ್ಗವಾಗಿ ಅಂಬೇಡ್ಕರ್​ ವೃತ್ತ್ತದವರೆಗೆ ತಿರಂಗಾ ಯಾತ್ರೆ ನಡೆಸಲಾಗುತ್ತದೆ. ಪ್ರತಿಯೊಬ್ಬರ ಕೈಯಲ್ಲಿ ರಾಷ್ಟ್ರಧ್ವಜ ಹೊರತು ಬೇರೆ ಯಾವ ಧ್ವಜವೂ ಇರುವುದಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್​, ಬೌದ್ಧ, ಜೈನ ಸೇರಿ ಎಲ್ಲ ಧರ್ಮಗಳ, ಜಾತಿಗಳ ಜನರು ಮುಕ್ತವಾಗಿ, ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬಹುದಾಗಿದೆ. ವೇದಿಕೆ ಮೇಲೆ ಗಣ್ಯರ್ಯಾರೂ ಇರುವುದಿಲ್ಲ. ಎಲ್ಲರೂ ಮುಂಭಾಗದಲ್ಲೇ ಕುಳಿತುಕೊಳ್ಳುತ್ತಾರೆ. ವಿವಿಧ ರಂಗದಲ್ಲಿ ಕೆಲಸ ಮಾಡುವಂಥ ಒಬ್ಬೊಬ್ಬರಿಗೆ 5 ನಿಮಿಷದಂತೆ 45 ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮಾಜಿ ಸೈನಿಕ ಸಂಗಣ್ಣ ಕಟ್ಟಿ, ಡಾ. ಚಂದ್ರಶೇಖರ ಶಿವಯೋಗಿಮಠ, ರಾವುಸಾಬ ದೇಸಾಯಿ ಮಾತನಾಡಿ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರು. ಮಂಡಲ ಅಧ್ಯ ಜಗದೀಶ ಪಂಪಣ್ಣವರ್​, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಬಸವರಾಜ ಮುರಾಳ, ಬಸಪ್ಪ ತಟ್ಟಿ, ಜಿಪಂ ಮಾಜಿ ಉಪಾಧ್ಯ ಕೆಂಚಪ್ಪ ಬಿರಾದಾರ, ಮುಖಂಡರಾದ ಗಿರೀಶಗೌಡ ಪಾಟೀಲ ಹಿರೇಮುರಾಳ, ಪ್ರಭು ಕಡಿ, ಸಿದ್ದರಾಜ ಹೊಳಿ, ಹಣಮಂತ ನಾಯ್ಕಮಕ್ಕಳ, ಲಕ್ಷ$್ಮಣ ಬಿಜ್ಜೂರ, ಶಂಕರಗೌಡ ಶಿವಣಗಿ, ಸೋಮಶೇಖರ ಮೇಟಿ, ಡಾ. ರೇವಣಸಿದ್ದ ಮಸೂತಿ, ಡಾ. ವೀರೇಶ ಪಾಟೀಲ, ವಿಜಯಕುಮಾರ ಬಡಿಗೇರ, ಸೋಮನಗೌಡ ಬಿರಾದಾರ, ಎಂ.ಆರ್​. ಪಾಟೀಲ, ರಾಜು ಬಳ್ಳೊಳ್ಳಿ, ಬಸವರಾಜ ಸರೂರ, ಶೇಖರ ಢವಳಗಿ, ಸಂಗಮೇಶ ಗುಂಡಕನಾಳ, ಪುನೀತ್​ ಹಿಪ್ಪರಗಿ, ರಾಜಶೇಖರ ಮ್ಯಾಗೇರಿ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಕಾವೇರಿ ಕಂಬಾರ, ನಾಗೇಶ ಕವಡಿಮಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net