

ತಾಳಿಕೋಟೆ, ವಿವಾಹವು ಸಂಕಸ್ಕಾರಗಳ ಪೈಕಿ ಒಂದಾಗಿದೆ. ಇದು ಸತಿ&ಪತಿಗಳ ಜೀವನ ಬದ್ದತೆ ಯಾಗಿದೆ ಎಂದು ನರಗುಂದ ತಾಲೂಕಿನ ಬೇರನಟ್ಟಿ, ಶಿರೋಳ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಖಾಸ್ಗತೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಬಬಲೇಶ್ವರ ಮನೆತನದ ಪವನಕುಮಾರ ಹಾಗೂ ಸೀತಲ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಮಾತಾಣಡಿದ ಶ್ರೀಗಳು, ಹಿಂದು ಧರ್ಮದಲ್ಲಿ ನಡೆಯುವ ಮಧುವೆಗಳು ಅದರದ್ದೇ ಆದ ಆಚಾರ ವಿಚಾರಗಳ ಸಂಪ್ರದಾಯಗಳನ್ನು ಒಳಗೊಂಡಿವೆ.ಗ್ರಹಸ್ಥಾಶ್ರಮ ಸಾಮಾಜಿಕ ಸಂದರ್ಬದಲ್ಲಿ ಎಲ್ಲ ಹಂತಗಳಲ್ಲಿಯೂ ಮುಖವೆಂದು ಪರಿಗಣಿಸಲಾಗುತ್ತದೆ ಎಂದರು.
ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ನೀಲಕಂಠ ಬಬಲೇಶ್ವರ, ಶಿವಲಿಂಗಪ್ಪ, ಸಂಗಮೇಶ, ಶಂಕ್ರೆಪ್ಪ ಕುಬಸದ, ಶ್ರೀಶೈಲ ಬಬಲೇಶ್ವರ, ಸುಭಾಷ್ಯಾಳಗಿ, ಮಹಾಂತಪ್ಪ ಬೊಮ್ಮನಳ್ಳಿ, ವಾಸುದೇವ ಹೆಬಸೂರ, ಬಾಬುರಾವ ಶಿಂಧೆ, ಬಿ.ಎನ್.ಹಿಪ್ಪರಗಿ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಚಂದ್ರಶೇಖರ ಬಬಲೇಶ್ವರ, ಚನ್ನಬಸಪ್ಪ ಬಬಲೇಶ್ವರ, ತಿರುಪತಿ ನವಲೆ, ಅಶೋಕ ಶೆಟ್ಟಿ,ಪಾಲ್ಗೊಂಡಿದ್ದರು.