ಎನ್​ಟಿಪಿಸಿ ಕಾರ್ಮಿಕರಿಂದ ಬ್ಲಾಕ​ ಡೇ ಆಚರಣೆ

NTPC workers celebrate Black Day
ಕೂಡಗಿ ಎನ್​ಟಿಪಿಸಿ ಗುತ್ತಿಗೆ ಕಾರ್ಮಿಕರ ಸಂಟನೆಯ ಪದಾಧಿಕಾರಿಗಳು ಗುರುವಾರ ಕೈಗೆ ಕಪು$್ಪಪಟ್ಟಿ ಧರಿಸಿ ಆಕ್ರೊಶ ವ್ಯಕ್ತಪಡಿಸಿದರು. ಪ್ರವಿಣ ಕುಲಕರ್ಣಿ,ಮಹ್ಮದ್​ಆರ್​ೀ ತಾಳಿಕೋಟಿ ಇತರರಿದ್ದರು.
Published on

ಗೊಳಸಂಗಿ: ಕಾರ್ಮಿಕರ ದಿನಾಚರಣೆಯಂದು ರಜೆ ನೀಡದ್ದಕ್ಕೆ ಕೂಡಗಿ ಎನ್​ಟಿಪಿಸಿಯ ಕಾರ್ಮಿಕರು ಕೈಗಗೆ ಕಪು$್ಪಪಟ್ಟಿ ಕಟ್ಟಿಕೊಂಡು ಕೆಲಸಕ್ಕೆ ಹಾಜರಾಗುವ ಮೂಲಕ ಅಧಿಕಾರಿಗಳ ರ್ನಿಣಯ ಖಂಡಿಸಿದರು.

ಎನ್​ಟಿಪಿಸಿ ಗುತ್ತಿಗೆ ಕಾರ್ಮಿಕರ ಸಂಟನೆಯ ನೇತೃತ್ವದಲ್ಲಿ ಬ್ಲಾ$್ಯಕ್​ ಡೇ ಗೆ ಕರೆ ನೀಡಿದ ಕಾರ್ಮಿಕರು ಗುರುವಾರ ಎಂದಿನಂತೆ ಕೆಲಸಕ್ಕೆ ಹಾಜರಾದರು ಆದರೆ ಕಪ್ಪು ಪಟ್ಟಿ ಪ್ರದರ್ಶನದ ಮೂಲಕ ಆಕ್ರೋಶ ಹೊರ ಹಾಕಿದರು.

ಎನ್​ಟಿಪಿಸಿ ಕಾರ್ಮಿಕರಿಗೆ ವಾರ್ಷಿಕ 8 ದಿನ ಮಾತ್ರ ವೇತನ ಸಹಿತ ರಜೆ ನೀಡಲಾಗುತ್ತಿದೆ. ಮೇ1 ರಂದು ಪ್ರತಿವರ್ಷ ರಜೆ ನೀಡಬೇಕು. ಇಲ್ಲದಿದ್ದರೆ ಮುಂದಿನ ವರ್ಷ ಕಾರ್ಮಿಕರ ದಿನದಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಟನಾ ಕಾರ್ಯದರ್ಶಿ ಪ್ರವಿಣ ಕುಲಕರ್ಣಿ ಮಾತನಾಡಿ, ಎನ್​ಟಿಪಿಸಿಯಲ್ಲಿ ಕಾರ್ಮಿಕರ ದಿನವನ್ನು ಅಧಿಕಾರಿಗಳು ಮಾತ್ರ ಆಚರಿಸಿದ್ದಾರೆ. ಕಾರ್ಮಿಕರನ್ನು ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಟನೆಯ ಅಧ್ಯ ಮಹ್ಮದ್​ಆರ್​ೀ ತಾಳಿಕೋಟಿ, ಉಪಾಧ್ಯರಾದ ಹಸನಸಾಬ ಚೌರಾದ, ಸಂತೋಷ ಮಳಲಿ, ಸಂಟನಾ ಕಾರ್ಯದರ್ಶಿ ರತನ್​ ಚಿಮ್ಮಲಗಿ ಹಾಗೂ ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net