

ಇಂಡಿ: ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪೌರಕಾರ್ಮಿಕರು ನಡೆಸಿತ್ತಿರುವ ಅರ್ನಿದಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಸಂಸದರ ರಮೇಶ ಜಿಗಜಿಣಗಿ ಗುರುವಾರ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ಪೌರ ನೌಕರರ ಬೇಡಿಕೆ ನ್ಯಾಯ ಸಮ್ಮತವಾಗಿದ್ದು ಮುಖ್ಯಮಂತ್ರಿ ಮತ್ತು ಪೌರಾಢಳಿತ ಸಚಿವರ ಜತೆಗೆ ಚರ್ಚಿಸುವ ಮೂಲಕ ಈಡೇರಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಕಾಸುಗೌಡ ಬಿರಾದಾರ ಮಾತನಾಡಿ, ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ವಿಜಯಪುರದ ನಗರಸಭೆ ಸದಸ್ಯ ಮಳುಗೌಡ ಪಾಟೀಲ, ರಾವೇಂದ್ರ ಕಾಪಸೆ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಹುಚ್ಚಪ್ಪ ಶಿವಶರಣ, ಅಲ್ಲಾಭಕ್ಷ ಕಾಖಂಡಕಿ, ಲಕ್ಷಿ$್ಮ ಕಾಲೇಭಾಗ, ಶ್ರೀಶೈಲ ಗುಡ್ಲ, ಮಲ್ಲಿಕಾರ್ಜುನ ಶಿವಶರಣ, ಚಂದು ಕಾಲೆಭಾಗ, ಸುಭಾನಿ ಕಸಬ, ತಹಸೀನಬಾನು ವಾಲಿಕಾರ ಮತ್ತಿತರರಿದ್ದರು.