

ಬಸವನಬಾಗೇವಾಡಿ: ಹುಸಿ ಭರವಸೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ಯಾವತ್ತೂ ಜನರ ಕಷ್ಟದಲ್ಲಿ ಭಾಗಿ ಯಾಗಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಆರೋಪಿಸಿದರು.
ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ಕಾಂಗ್ರೆಸ್ ಸಾಧನಾ ಸಮಾವೇಶ ನಿಮಿತ್ತ ಪಟ್ಟಣದ ಗವಿಮಠದ ಶ್ರೀಪವಾಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯತೆ ವಹಿಸಿ ಮಾತನಾಡಿದವರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 70 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ೂಷಿಸಿ ಜಾರಿಗೆ ತಂದಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅವರು ೂಷಿಸಿದ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.
ಬಿಜೆಪಿ ನಾಯಕರು ಪಂಚ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಜತೆ ಇತರೆ ಯೋಜನೆಗಳಿಗೂ ಅನುದಾನ ನೀಡುತ್ತಿದೆ. ಇದು ಬಿಜೆಪಿ ಪದವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಮುಳುಗಡೆಯಾಗಿರುವ ಕೊಲ್ಹಾರ ಪುರ್ನವಸತಿ ಪಟ್ಟಣ ನಿರ್ಮಾಣವಾಗಿ 25 ವರ್ಷ ಕಳೆದಿವೆ. ನನ್ನ ಅವಧಿಯಲ್ಲಿ ಕೊಲ್ಹಾರ ಪಟ್ಟಣ ಸಮಗ್ರ ಅಭಿವೃದ್ಧಿಯಾಗಿದ್ದು, ಮೇ 23 ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತು ಚುನಾವಣೆಯಲ್ಲಿ ಸಂಕಲ್ಪ ಮಾಡಿದಂತೆ ನಾವು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಜಾರಿಗೆ ತಂದಿದ್ದೇವೆ. ಸರ್ಕಾರ ಎರಡು ವರ್ಷ ಪೂರೈಸಿರುವ ಈ ಹಂತದಲ್ಲಿ ಹೊಸಪೇಟೆಯಲ್ಲಿ ಮೇ 20 ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ನಿಮಗೆಲ್ಲ ಆಹ್ವಾನ ಕೊಡಲು ಬಂದಿದ್ದೇನೆ. ಐತಿಹಾಸಿಕ ಸಮಾವೇಶಕ್ಕೆ ನೀವೆಲ್ಲ ಸಾಯಾಗಬೇಕು ಎಂದು ಮನವಿ ಮಾಡಿದರು.
ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಜಿ.ಪಂ. ಮಾಜಿ ಅಧ್ಯ ಚಂದ್ರಶೇಖರ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯರ ಸುರೇಶ ಹಾರಿವಾಳ, ಜಿ.ಪಂ.ಮಾಜಿ ಸದಸ್ಯ ಕಲ್ಲಪ್ಪ ದೇಸಾಯಿ, ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ, ರಫೀಕ್ ಪಕಾಲಿ, ಮುಖಂಡರಾದ ಎ.ಎಂ.ಪಾಟೀಲ ಉಕ್ಕಲಿ, ಸಿದ್ಧಣ್ಣ ನಾಗಠಾಣ, ಲೋಕನಾಥ ಅಗರವಾಲ್, ರಮೇಶ ಸೂಳಿಭಾವಿ, ಸಂಗಮೇಶ ಓಲೇಕಾರ, ತಾನಾಜಿ ನಾಗರಾಳ, ಪ್ರೇಮು ಮ್ಯಾಗೇರಿ, ಮಲ್ಲಿಕಾರ್ಜುನ ನಾಯಕ, ಕಮಾಲಸಾಬ ಕೊರಬು ಉಪಸ್ಥಿತರಿದ್ದರು.