

ವಿಜಯಪುರ: ಹಾಲುಮತ ಸಮಾಜದ ಸಂಸತಿ ಭಾರತದ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಗುರುವಾರ ಜರುಗಿದ ಬೀರಲಿಂಗೇಶ್ವರ ಮತ್ತು ಭೀಮರಾಯ ಮುತ್ಯಾ ಜಾತ್ರಾ ಮಹೋತ್ಸವ, ಹಿರಿಯ ಹಬ್ಬದ ನಿಮಿತ್ತ ದ್ವಾರಬಾಗಿಲು ನಿರ್ಮಾಣಕ್ಕೆ ಗುದ್ದಲಿ ಪೂಜೆ, ಬೆಳ್ಳಿ ಪಲ್ಲಕ್ಕಿ ಸಮರ್ಪಣೆ ಹಾಗೂ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಹಾಲುಮತ ಸಮಾಜದ ಆಚರಣೆಗಳು ಹಾಲಿನಷ್ಟೆ ಶುದ್ಧವಾಗಿವೆ. ನಾಡಿಗೆ ಶ್ರೀ ಬೀರಲಿಂಗೇಶ್ವರ, ಶ್ರೀಭಿಮರಾಯ, ಶ್ರೀಸೋಮಲಿಂಗ, ಅಮೋಸಿದ್ಧ ಅನೇಕ ಪವಾಡ ಪುರುಷರನ್ನು ನೀಡಿದ ಕೀರ್ತಿ ಬಸವನಾಡು ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ ಎಂದರು.
ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಕೈಗಾರಿಕೆ ಸಚಿವರಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ತರುವ ಮೂಲಕ ಯುವಕರಿಗೆ ಉದ್ಯೋಗ ಒದಗಿಸುತ್ತಿದ್ದಾರೆ ಎಂದರು.
ಹುಲಜಂತಿ ಪೀಠಾಧಿಪತಿ ಶ್ರೀಮಾಳಿಂಗರಾಯ ಮಹಾರಾಯರು ಸಾನಿಧ್ಯ ವಹಿಸಿದ್ದರು.
ಸಚಿವ ಭೈರತಿ ಸುರೇಶ, ಮಾಜಿ ಶಾಸಕರಾದ ಪ್ರೊ.ರಾಜು ಆಲಗೂರ, ಶರಣಪ್ಪ ಸುಣಗಾರ, ಖ್ಯಾತ ನೇತ್ರತ ಡಾ.ಪ್ರಭುಗೌಡ ಲಿಂಗದಳ್ಳಿ, ಮುಂಖಡರಾದ ಸುರೇಶಗೌಡ ಬಿರಾದಾರ, ಆನಂದ ದೊಡಮನಿ, ಬಿ.ಡಿ.ಪಾಟೀಲ, ಬಸೀರಶೇಠ ಬೇಪಾರಿ, ಬಸವರಾಜ ಎನ್. ಕುಮಸಗಿ, ಜಿ.ಪಂ.ಮಾಜಿ ಅಧ್ಯೆ ಸುಜಾತಾ ಕಳ್ಳಿಮನಿ, ಗೌರಮ್ಮ ಪಾಲ್ಗೊಂಡಿದ್ದರು.