ಹಿಂದುಸ್ತಾನದಲ್ಲಿ ಹಿಂದುಗಳ ರಣೆಯಾಗಲಿ

May the Hindus prosper in Hindustan.
ವಿಜಯಪುರದ ಶ್ರೀಕೃಷ್ಣ ವಾದಿರಾಜ ಮಠಕ್ಕೆ ಶನಿವಾರ ಭೇಟಿ ನೀಡಿದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಭಕ್ತರಿಗೆ ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
Published on

ವಿಜಯಪುರ: ಹಿಂದುಸ್ತಾನದಲ್ಲಿ ಹಿಂದುಗಳಿಗೆ ರಣೆಯಿಲ್ಲದಂತಾಗಿದೆ. ಧರ್ಮ ಉಳಿವಿಗಾಗಿ ಹಿಂದು ಧರ್ಮಿಗಳು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥರು ಹೇಳಿದರು.

ನಗರದ ಶ್ರೀಕೃಷ್ಣ ವಾದಿರಾಜ ಮಠಕ್ಕೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಟನೆ ಪ್ರಸ್ತಾಪಿಸಿ, ಪ್ರಧಾನ ಮಂತ್ರಿಗಳು ಪ್ರತಿಕಾರ ತೀರಿಸಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕಾಂಗ, ನ್ಯಾಯಾಂಗ ಕಾರ್ಯಾಂಗಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಬಡ, ದೀನ& ದಲಿತರರಿಗೆ ನ್ಯಾಯ ಕೊಡಿಸುವ ಮೂಲಕ ಪತ್ರಿಕಾರಂಗ ಸೇರಿ ನಾಲ್ಕು ಅಂಗಗಳು ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದರು.

ಮತ ಬ್ಯಾಂಕ್​ಗಾಗಿ ರಾಜಕೀಯ ಮುಖಂಡರು ಜಾತಿ&ಜಾತಿಗಳ ನಡುವೆ ಕಲಹ ಹಚ್ಚುತ್ತಿದ್ದಾರೆ. ರಾಜ್ಯದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ. ಹಿಂದು ಧರ್ಮದ ಮೇಲೆ ಆಕ್ರಮಣ ನಡೆಯುತ್ತಿದೆ. ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಆಳುವ ಸರ್ಕಾರಗಳು ಎಲ್ಲ ಧರ್ಮಗಳ ರಣೆ ಮಾಡಬೇಕು. ಆದರೆ ರಾಜ್ಯದಲ್ಲಿ ಒಂದು ಕೋಮಿಗೆ ತುಷ್ಟೀಕರಣ ಮಾಡುತ್ತಿದೆ. ಹಿಂದು ಧರ್ಮವನ್ನು ತುಳಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

ಎಷ್ಟೋ ಧರ್ಮಗಳು ಹುಟ್ಟಿ, ನಾಶ ಹೊಂದಿವೆ. ಆದರೆ ಸನಾತನ ಧರ್ಮ ಮಾತ್ರ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ. ಸಹಸ್ರಾರು ವರ್ಷಗಳಿಂದಲೂ ಹಿಂದು ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಆದರೂ ಹಿಂದು ಧರ್ಮಕ್ಕೆ ಯಾವುದೇ ಧಕ್ಕೆ ಯುಂಟಾಗಿಲ್ಲ ಎಂದರು.

ಜಾತಿ ಗಣತಿ ಸರಿಯಾದ ರೀತಿಯಲ್ಲಿ ನಡೆದು ಎಲ್ಲ ಜಾತಿ ಜನಾಂಗದವರಿಗೆ ಅನುಕೂಲವಾಗುವಂತಾಗಲಿ ಎಂದರು. ಹಿಂದು ಧರ್ಮ ರಣೆಗಾಗಿ ಪೇಜಾವರ ಮಠ ನಿರಂತರ ಶ್ರಮಿಸುತ್ತಿದೆ. ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದರು. ಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದ ಶ್ರೀಗಳು ಭಕ್ತರಿಗೆ ಲಮಂತ್ರಾತೆ ನೀಡಿ ಆಶೀರ್ವದಿಸಿದರು.

ಅಖಿಲ ಭಾರತ ಮಧ್ವ ಮಹಾ ಮಂಡಳದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ಪಂ. ವಾಸುದೇವಾಚಾರ್ಯ ಅಗ್ನಿಹೋತ್ರಿ, ಅಶೋಕರಾವ, ಗೋವಿಂದ ಜೋಶಿ, ವೆಂಕಟೇಶ ಗುಡಿ, ಆರ್​ .ಬಿ. ಕುಲಕರ್ಣಿ, ವಿ.ಬಿ. ಕುಲಕರ್ಣಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಅರ್ಚಕ ಸಮೀರಾಚಾರ್ಯ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net