

ತಾಳಿಕೋಟೆ: ವಿದ್ಯಾರ್ಥಿ ಮತ್ತು ಯುವಕರು ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಮೂಡಬೇಕು ಎಂದು ವೀ.ವಿ.ಸಂದ ಅಧ್ಯ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಹೇಳಿದರು.
ಪಟ್ಟಣದ ವೀ.ವಿ.ಸಂದ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳ, ಎನ್.ಎಸ್.ಎಸ್. ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮಾತಾಣಡಿದರು.
ಮಾನವ ಕಂಪ್ಯೂಟರ್ ಬಸವರಾಜ ಉಮರಾಣಿ ಮಾತನಾಡಿ, ಈ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ನಾಡಿನ ವಿವಿಧ ಪ್ರತಿಷ್ಠಿತ ಸಂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಾಧನೆ ಮಾಡಿದ ಕಾಲೇಜಿನ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು, ವಿವಿಧ ಸಾಂಸತಿಕ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆ, ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕನ್ನಡ, ಇತಿಹಾಸ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕಿ ಡಾ.ದೀಪಾ ಮಾಳಗೆ ನಗದು ಬಹು ವಿತರಿಸಿದರು.
ವೀ.ವಿ.ಸಂದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕೆ.ಎಸ್.ಮುರಾಳ, ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯ ಡಾ.ಹೇಮಾ ಜೈನಾಪುರ,ರಮೇಶ ಜಾಧವ ಉಪಸ್ಥಿತರಿದ್ದರು.
ಐಶ್ವರ್ಯ ಹೂಗಾರ ಪ್ರಾರ್ಥಿಸಿದರು. ಎಸ್.ಜಿ. ಕೊಡಕಲ್ಲಮಠ ಪರಿಚಯಿಸಿದರು, ಪ್ರಾಚಾರ್ಯ ಡಾ.ದಯಾನಂದ ಮೂಗಡ್ಲಿಮಠ ಸ್ವಾಗತಿಸಿದರು. ಕೆ.ಬಿ.ದೇಸಾಯಿ ನಿರೂಪಿಸಿದರು. ಗದ್ದೆಣ್ಣ ಪೂಜಾರಿ ವಂದಿಸಿದರು.