ಬೀರಲದಿನ್ನಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೆಪಿಎಸ್​ ಗರಿ

KPS Gari to Biraladinni Government Primary School
ಬೀರಲದಿನ್ನಿ ಗ್ರಾಮದಲ್ಲಿ ಕೆಪಿಎಸ್​ ಬಡ್ತಿ ಹೊಂದಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ.
Published on

ಗೊಳಸಂಗಿ: ಬೀರಲದಿನ್ನಿ ಗ್ರಾಮದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಗೊಳಸಂಗಿ, ಬೇನಾಳ&ಎನ್​ಎಚ್​ ಗ್ರಾಮಗಳಿಗೆ ಹತ್ತಾರು ಕಿಮೀ. ದೂರ ತೆರಳಬೇಕಿತ್ತು. ಈಗ ಬೀರಲದಿನ್ನಿ ಗ್ರಾಮದ ಶಾಲೆ ಕರ್ನಾಟಕ ಪಬ್ಲಿಕ್​ ಸ್ಕೂಲ್​ (ಕೆಪಿಎಸ್​) ಆಗಿ ಬಡ್ತಿ ಪಡೆದಿರುವುದರಿಂದ ಅನ್ಯ ಗ್ರಾಮನಗಳಿಗೆ ಹೋಗಿ ಶಿಕ್ಷಣ ಪಡೆಯುವುದು ತಪ್ಪಿದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ&50 ಕ್ಕೆ ಹೊಂದಿಕೊಂಡಿದ್ದರೂ ಸರಿಯಾದ ಬಸ್ಸಿನ ಸಂಪರ್ಕ ಹೊಂದಿರದ ಗ್ರಾಮ ಬೀರಲದಿನ್ನಿ. ಈ ಗ್ರಾಮದಲ್ಲಿ ಒಂದರಿಂದ ಎಂಟನೆ ತರಗತಿ ವರಿಗೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇತ್ತು. ಮಕ್ಕಳು ಹೆಚ್ಚಿನ ಶಿಣ ಪಡೆಯಲು ದೂರದ ಗೊಳಸಂಗಿ, ಬೇನಾಳ&ಎನ್​ಎಚ್​, ನಿಡಗುಂದಿಯನ್ನೇ ಅವಲಂಭಿಸುವುದು ಅನಿವಾರ್ಯವಾಗಿತ್ತು.

ಇಂಥ ಊರಿಗೆ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್​ ಸ್ಕೂಲ್​ಗೆ ಮಂಜೂರಾತಿ ನೀಡಿ ಆದೇಶ ಹೊರಡಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net