

ಬಸವನಬಾಗೇವಾಡಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಬಸವನಬಾಗೇವಾಡಿ ಪಾಕಿಸ್ತಾನ ಎಂದು ಹೇಳುವ ಮೂಲಕ ಬಸವಾದಿ ಶರಣರಿಗೆ ಅಪಮಾನ ಮಾಡಿದ್ದಾರೆ. ತಣ ಮೆಯಾಚಿಸಬೇಕು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯ ಸುರೇಶ ಹಾರಿವಾಳ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಜಯಂತಿಯಂದು ಸಚಿವ ಶಿವಾನಂದ ಪಾಟೀಲರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಬಸವನಬಾಗೇವಾಡಿ ಮತೇತ್ರವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ್ದಾರೆ. ತಕ್ಷಣ ಯತ್ನಾಳ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಬಸವ ಭಕ್ತರು ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವರಾದ ಶಿವಾನಂದ ಪಾಟೀಲರು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ತಮ್ಮ ತಂದೆಯ ಮಗನೆಂಬುದು ಸಾಬಿತುಪಡಿಸಿದ್ದಾರೆ. ನೀವು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಮ್ಮ ತಂದೆಯ ಮಗನೆಂದು ಸಾಬಿತು ಪಡಿಸಿ ಎಂದು ಸವಾಲು ಹಾಕಿದರು.
ಯತ್ನಾಳರ ಪೂರ್ವ ಅಡ್ಡಹೆಸರು ಬೆರೆಯಿತ್ತು. ನಂತರ ಅವರು ಪಾಟೀಲ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಈ ಕುರಿತು ನಮ್ಮ ಬಳಿ ದಾಖಲಗಳಿವೆ ಎಂದು ಅವರು ಹೇಳಿದರು.
ಪುರಸಭೆ ಅಧ್ಯೆ ಜಗದೇವಿ ಗುಂಡಳ್ಳಿ, ಸ್ಥಾಯಿ ಸಮಿತಿ ಮಾಜಿ ಅಧ್ಯ ಸಂಗಮೇಶ ಓಲೇಕಾರ, ಪಿ.ಕೆ.ಪಿ.ಎಸ್ ಅಧ್ಯ ಪ್ರೇಮಕುಮಾರ ಮ್ಯಾಗೇರಿ, ಟಿ.ಪಿ.ಎಂ.ಸಿ.ಅಧ ಶೇಖರಗೌಡ ಪಾಟೀಲ್, ಎ.ಪಿ.ಎಂ.ಸಿ.ಮಾಜಿ ಅಧ್ಯ ಶೇಖರ ಗೊಳಸಂಗಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯ ಶಿವನಗೌಡ ಗುಜಗೊಂಡ, ರವಿ ರಾಠೋಡ, ಬಸವರಾಜ ಹಾರಿವಾಳ, ರುಕ್ಮಿಣಿ ರಾಠೋಡ, ಪುರಸಭೆ ಸದಸ್ಯರಾದ ದೇವೆಂದ್ರ ಚವ್ಹಾಣ, ರವಿ ನಾಯ್ಕೋಡಿ, ಎಂ.ಜಿ. ಅದಿಗೊಂಡ ಸುದ್ದಿಗೊಷ್ಠಿಯಲ್ಲಿದ್ದರು.